ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಪುಣ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಬಡಗಿಯೊಬ್ಬನ ಪ್ರತಿಭೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ವೈರಲ್ ಆಗಿತ್ತು. ಅದರಂತೆ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ಕೂಡ ತನಗೊಂದು ಕಾರು ಬೇಕೆಂಬ ಬಯಕೆ ಇದ್ದೇ ಇರುತ್ತದೆ ಆದರೆ ಅದಕ್ಕೆ ಬೇಕಾದಷ್ಟು ಆರ್ಥಿಕ ಸೌಲಭ್ಯವಿರುವುದಿಲ್ಲ. ಟ್ಯಾಲೆಂಟ್ ಇದ್ರೆ ಸಾಕು ಹಣ ಬೇಕಿಲ್ಲ ಅಂತ ಯುವಕನೊಬ್ಬ ಸಾಮಾನ್ಯ ಕಾರನ್ನು ದುಬಾರಿ ಕಾರನ್ನಾಗಿ ತಯಾರು ಮಾಡಿದ್ದಾನೆ.
ಕೇರಳದ ಯುವಕನೊಬ್ಬ ಮಾರುತಿ 800 ಕಾರನ್ನು ರೋಲ್ಸ್ ರಾಯ್ಸ್ ಕಾರನ್ನಾಗಿ ಪರಿವರ್ತಿಸಿದ್ದಾನೆ. ಮಾರುತಿ ಕಾರು 800 ಎಂದರೆ ಮಧ್ಯಮ ವರ್ಗದ ಕಾರು..ಇಂತಹ ವಾಹನವನ್ನು ಕೇರಳದ ಹದೀಫ್ ಎಂಬ ಯುವಕ ರೋಲ್ಸ್ ರಾಯ್ಸ್ ಕಾರನ್ನಾಗಿ ಪರಿವರ್ತಿಸಿದ್ದಾನೆ. ರೋಲ್ಸ್ ರಾಯ್ಸ್ ಶ್ರೀಮಂತರು ಮಾತ್ರ ಖರೀದಿಸಬಹುದಾದ ಕಾರು. ಆದರೆ ಹದೀಫ್ ತನ್ನ ಪ್ರತಿಭೆಯಿಂದ ಶ್ರೀಸಾಮಾನ್ಯನ ಮಾರುತಿ ಕಾರನ್ನು ಶ್ರೀಮಂತರ ರೋಲ್ಸ್ ರಾಯ್ಸ್ ಕಾರನ್ನಾಗಿ ಮಾಡಿದರು.
ಹದಿಫ್‌ಗೆ 18 ವರ್ಷ. ಆಟೋಮೊಬೈಲ್‌ನಲ್ಲಿ ಉತ್ತಮ ಆಲೋಚನೆ ಇರುವ ಹುಡುಗ. ಅವರಿಗೆ ದುಬಾರಿ ಕಾರುಗಳಲ್ಲಿ ಆಸಕ್ತಿಯಿದ್ದು, ಖರೀದಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಗಿಯೇ ಪ್ರತಿಭೆಯಿಂದ ತಮ್ಮ ಕನಸನ್ನು ನನಸಾಗಿಸಲು ಬಯಸಿದ್ದರು. ಪರಿಶ್ರಮದ ಪ್ರತಿಫಲವಾಗಿ ಮಾರುತಿ 800 ಕಾರನ್ನು ರೂ.45 ಸಾವಿರ ವೆಚ್ಚದಲ್ಲಿ ರೋಲ್ಸ್ ರಾಯ್ಸ್ ಆಗಿ ಪರಿವರ್ತಿಸಿದ್ದಾರೆ. ಇದನ್ನು ನೋಡಿದವರೆಲ್ಲರೂ ವಾವ್ ಎಂದು ಹೇಳುತ್ತಿದ್ದಾರೆ. ಕೌಶಲ್ಯವಿದ್ದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂಬುದನ್ನು ಸಾಬೀತುಪಡಿಸಿದ ಹದೀಫ್ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ.
ಹಳೆಯ ರೋಲ್ಸ್ ರಾಯ್ಸ್ ಕಾರುಗಳ ಭಾಗಗಳನ್ನು ಸಂಗ್ರಹಿಸಿ..ಮತ್ತು ಮಾರುತಿ 800 ಕಾರಿಗೆ ಬಣ್ಣ ಬಳಿದಿದ್ದಾರೆ. ಕಾರಿ ಹೆಡ್ ಲೈಟ್‌ನಿಂದ ರೋಲ್ಸ್ ರಾಯ್ಸ್ ಕಾರಿನವರೆಗೆ ಸಂಪೂರ್ಣ ನೋಟವನ್ನು ತಮ್ಮದೇ ಆದ ಶೈಲಿಯಲ್ಲಿ ವಿನ್ಯಾಸಗೊಳಿಸಿದರು. ಈ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ನಂತರ, ನೆಟ್ಟಿಗರು ಪ್ರಶಂಸೆಯ ಸುರಿಮಳೆಗರೆದಿದ್ದಾರೆ.