ಶಾಲೆಗಳಾಗಿ ಮಾರ್ಪಾಡಾಗಲಿವೆ ಕೇರಳ ಕೆಎಸ್‌ಆರ್‌ಟಿಸಿ ಬಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೇವೆಗೆ ಯೋಗ್ಯವಲ್ಲದ ಬಸ್‌ಗಳನ್ನು ಶಾಲೆಗಳಾಗಿ ಪರಿವರ್ತನೆ ಮಾಡುವ ಕಾರ್ಯಕ್ಕೆ ಕೇರಳ ಸರ್ಕಾರ ಕೈ ಹಾಕಿದೆ. ಹೌದು ಕೊರೊನಾ ಸಂದರ್ಭದಲ್ಲಿ ರಸ್ತೆಗಿಳಿಯದೆ, ಹಾಳಾದ ಹಾಗೂ ಅವಧಿ ಮೀರಿದ ಬಸ್‌ಗಳನ್ನು ತುಕ್ಕು ಹಿಡಿಸುವ ಬದಲು ಉಪಯೋಗವಾಗುವಂತೆ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ವ್ಯಾಪ್ತಿಯಲ್ಲಿ ಬಳಕೆಯಲ್ಲಿಲ್ಲದ ಬಸ್ ಗಳನ್ನು ರದ್ದುಪಡಿಸುವ ಬದಲು ತರಗತಿ ಕೊಠಡಿಯನ್ನಾಗಿ ಬಳಸುವುದು ಉತ್ತಮ ಎಂಬ ಚಿಂತನೆ ನಮ್ಮ ಮುಂದಿದೆ ಎಂದು ಸಚಿವ ಆಂಟನಿರಾಜು ತಿಳಿಸಿದರು. ಲೋ ಫ್ಲೋರ್ ಬಸ್ ಗಳನ್ನು ತರಗತಿ ಕೊಠಡಿಗಳನ್ನಾಗಿ ಪರಿವರ್ತಿಸುವುದರಿಂದ ಮಕ್ಕಳಿಗೆ ಹೊಸ ಅನುಭವ ಸಿಗಲಿದೆ. ಆರಂಭದಲ್ಲಿ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಎರಡು ಅಂತಸ್ತಿನ ಬಸ್‌ಗಳನ್ನು ಸ್ಥಾಪಿಸಲಾಗುವುದು. ಬಳಿಕ ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದರು.

ಒಟ್ಟು 400 ಬಸ್‌ಗಳನ್ನು ತರಗತಿ ಕೊಠಡಿಗಳಾಗಿ ಪರಿವರ್ತಿಸಲಾಗುವುದು. ಈ ಆಲೋಚನೆಯ ಹರಿಕಾರ ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ. ಅವರ ಈ ಆಲೋಚನೆಯನ್ನು ಸಾರಿಗೆ ಇಲಾಖೆ ಒಪ್ಪಿಕೊಂಡಿರುವುದಾಗಿ ಸಚಿವ ಆಂಟನಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!