ಕೇರಳದ ಅಭಿವೃದ್ಧಿಗೆ ಬೇಕು ಡಬಲ್ ಎಂಜಿನ್ ಸರ್ಕಾರ: ದೇವರನಾಡಿನಲ್ಲಿ ನಮೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳದ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ ಮೋದಿ, ಮುಂಬರುವ ಓಣಂ ಹಬ್ಬಕ್ಕೆ ಶುಭಕೋರಿದರು.

ಇದೇ ವೇಳೆ ಕೇರಳದ ಜನ ಬಿಜೆಪಿಯನ್ನು ಹೊಸ ಆಶಾವಾದದಲ್ಲಿ ನೋಡುತ್ತಿದ್ದಾರೆ. ದೇಶದ ಇತರ ರಾಜ್ಯಗಲ್ಲಿ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಯ ವೇಗದಲ್ಲಿ ಸಾಗುತ್ತಿದೆ. ಕೇರಳದಲ್ಲೂ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ ಇದೆ. ಈ ಮೂಲಕ ಕೇರಳವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದ್ದಾರೆ.

ಇಂದು ಋಷಿ ಪಂಚಮಿ ದಿನವಾಗಿದೆ. ಕೇರಳದ ಪವಿತ್ರ ಭೂಮಿಯಲ್ಲಿ ಹಲವು ಋಷಿಮುನಿಗಳಿದ್ದ ನಾಡಾಗಿದೆ. ಅವರ ಕೂಡುಗೆ, ಮಾರ್ಗದರ್ಶನವನ್ನು ನಾನು ಸ್ಮರಿಸುತ್ತೇನೆ. ಆದಿ ಶಂಕರಾಚಾರ್ಯರು ಆಧ್ಯಾತ್ಮದ ಮೂಲಕ ಭಾರತವನ್ನು ಒಂದುಗೂಡಿಸಿದರು.ಇದು ನನ್ನ ಸೌಭಾಗ್ಯವಾಗಿದೆ. ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಭೇಟಿ ನೀಡುತ್ತೇನೆ. ಇದು ಅತೀವ ಸಂತಸ ತಂದಿದೆ ಎಂದು ಮೋದಿ ಹೇಳಿದ್ದಾರೆ.

ಆದಿ ಶಂಕರಾಚಾರ್ಯರು , ಪೂಜ್ಯ ನಾರಾಯಣ ಗುರು, ಶ್ರೀ ಅಯ್ಯ ವೈಕುಂಟ ಸ್ವಾಮಿ ಸೇರಿದಂತೆ ಹಲವು ಧರ್ಮ ಗುರುಗಳು ಸಮಾಜದಲ್ಲಿ ಪಿಡುಗುಗಳನ್ನು ತೊಡಗಿಸಲು ಅವಿರತ ಶ್ರಮವಹಿಸಿದ್ದಾರೆ. ಸಮಾಜದ ಏಳಿಗೆಗಾ ಶ್ರಮಿಸಿದ್ದಾರೆ. ಅವರ ಮಹತ್ ಸೇವೆಯನ್ನು ನಾನು ಸ್ಮರಿಸುತ್ತೇನೆ. ಇವರ ಮಾರ್ಗದರ್ಶನ, ಪ್ರೇರಣೆಯಿಂದ ಭಾರತವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾಗಲಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು. ಇದೇ ವೇಳೆ ಎಲ್ಲರಿಗೂ ಒಣಂ ಹಬ್ಬದ ಶುಭಾಶಯಗಳು ಎಂದು ಮೋದಿ ಹೇಳಿದ್ದಾರೆ.

ಪಿಎಂ ಕಿಸಾನ್ ಯೋಜನೆಯಡಿ ಕೇರಳದ 37 ಲಕ್ಷ ಕುಟುಂಬಳು ಇದರ ಫಲಾನುಭವವಿಗಳಾಗಿದ್ದಾರೆ. ಮೀನುಗಾರರ ಕ್ಷೇತ್ರಕ್ಕೂ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಡಿ ಹಲವು ಸೌಲಭ್ಯಗಳನ್ನು ಕೇಂದ್ರ ನೀಡಿದೆ. ಭಾರತದ ಯಾವ ರಾಜ್ಯದಲ್ಲೆಲ್ಲಾ ಡಬಲ್ ಎಂಜಿನ್ ಸರ್ಕಾರವಿದೆಯೋ ಅಲ್ಲೆಲ್ಲ ಅಭಿವೃದ್ಧಿ ಮಿಂಚಿನ ವೇಗದಲ್ಲಿ ನಡೆಯುತ್ತಿದೆ. ಕೇರಳದ ತ್ವರಿತಗತಿಯ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ ಇದೆ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ಇಡೀ ವಿಶ್ವಕ್ಕೆ ಎದುರಾಗಿರುವ ಅತೀ ದೊಡ್ಡ ಸಂಕಷ್ಟವಾಗಿದೆ. ಇಂದು ವಿಶ್ವದ ಅತೀ ದೊಡ್ಡ ರಾಷ್ಟ್ರಗಳು ಔಷದಿ, ಲಸಿಕೆ ಕೊರತೆ ಎದುರಿಸುತ್ತಿದೆ. ಆದರೆ ಭಾರತ ಲಸಿಕೆ ಸೇರಿದಂತೆ ಕೊರೋನಾ ವಿರುದ್ಧ ಶಕ್ತ ಹೋರಾಟ ನಡೆಸಿದೆ. ಕೊರೋನಾ ಸಂದರ್ಭದಲ್ಲಿ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಪಡಿತರ ನೀಡಲಾಗುತ್ತಿದೆ. ಕೇರಳ ರಾಜ್ಯಕ್ಕಾಗಿ 6,000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಭಾರತದ ಜಿಎಸ್‌ಟಿ ಸಂಗ್ರಹ, ಹಂಚಿಕೆ, ಆದಾಯದ ಕ್ರೋಢಿಕರಣದ ಕುರಿತೂ ದಾಖಲೆ ಸೃಷ್ಟಿಯಾಗಿದೆ. ಕೇರಳದ ಜನರು ಬಿಜೆಪಿಯನ್ನು ಹೊಸ ಆಶಾವಾದವಾಗಿ ನೋಡುತ್ತಿದ್ದಾರೆ. ಭ್ರಷ್ಟಾಚಾರ, ಅಸಮರ್ಪಕ ಆಡಳಿತದಿಂದ ಕೇರಳ ಜನ ಬೇಸತ್ತಿದ್ದಾರೆ. ಅಭಿವೃದ್ಧಿಗೆ ಅತೀ ದೊಡ್ಡ ಅಡ್ಡಿ ಎಂದರೆ ಭ್ರಷ್ಟಚಾರ. ಆಗಸ್ಟ್ 15ರ ಭಾಷಣದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ಅತ್ಯಗತ್ಯ ಎಂದು ಒತ್ತಿ ಹೇಳಿದ್ದೆ. ಭ್ರಷ್ಟಾಚಾರ ಹಾಗೂ ಭ್ರಷ್ಟಾಚಾರಿಗಳನ್ನು ರಕ್ಷಿಸಲು ಕೆಲ ಪಕ್ಷಗಳು ಯತ್ನಿಸುತ್ತಿದೆ. ಆದರೆ ಬಿಜೆಪಿ ಭ್ರಷ್ಟಾಚಾರ ವಿರುದ್ದ ಶಕ್ತ ಹೋರಾಟ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!