Sunday, December 3, 2023

Latest Posts

ಸಚಿವ ನಾಗೇಶ್ ಮನೆ ಮೇಲಿನ ದಾಳಿ ಪ್ರಕರಣ, ಸಮಗ್ರ ತನಿಖೆಗೆ ಕೆ.ಜಿ.ಬೋಪಯ್ಯ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:‌ 

ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆ ಮೇಲಿನ ದಾಳಿ, ಡಿಜೆಹಳ್ಳಿ ಕೆಜೆಹಳ್ಳಿ ದಾಳಿಯ ಹೋಲಿಕೆ ಕಂಡುಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ತರಹ ಮನೆಗೆ ಬೆಂಕಿ ಹಚ್ಚುವವರು ಲಾಠಿಯ ಸದ್ದಿನಿಂದ ಪಾಠ ಕಲಿಯುವವರಲ್ಲ, ಬದಲು ನಳಿಕೆಯ ಶಬ್ಧದಿಂದ ಮಾತ್ರ ಬದಲಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಗೂಂಡಾ ಸಂಸ್ಕೃತಿಯ ಪ್ರತೀಕವಾಗಿದ್ದು, ಅದರ ಬಹುತೇಕ ನಾಯಕರು ಗೂಂಡಾ ರಾಜ್ಯ ಮಾಡುವ ಕನಸು ಹೊತ್ತಿರುವ ಬ್ರ್ಯಾಂಡ್ ಅಂಬಾಸಿಡರ್‌ಗಳು. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರೇ ಕೊತ್ವಾಲ್ ರಾಮಚಂದ್ರನ ಶಿಷ್ಯ. ಯುವ ಘಟಕದ ರಾಜ್ಯಾಧ್ಯಕ್ಷ ಓರ್ವ ಮರಿ ಪುಡಾರಿಗಳ ನಾಯಕ. ಇವರಿಂದ ಭವಿಷ್ಯದಲ್ಲಿ ರಾಜ್ಯದ ಜನತೆ ಯಾವ ಒಳಿತನ್ನು ಬಯಸಲು ಸಾಧ್ಯವಿದೆ ಎಂದು ಬೋಪಯ್ಯ ಪ್ರಶ್ನಿಸಿದ್ದಾರೆ.
ಶಿಕ್ಷಣ ಸಚಿವರಾದ ಬಿ‌.ಸಿ ನಾಗೇಶ್ ಅವರ ಮನೆಯ ಮೇಲೆ ದಾಳಿ ಮಾಡಿರುವ ಎನ್.ಎಸ್.ಯು.ಐ.ನ ಪುಡಿ ರೌಡಿಗಳು ಕಾಂಗ್ರೆಸ್ ಗರಡಿಯಲ್ಲಿ ಪಳಗುತ್ತಿರುವ ಪಕ್ಷದ ಮುಂದಿನ ಭವಿಷ್ಯ ಎಂಬಂತೆ ಭಾಸವಾಗುತ್ತಿದ್ದು, ರಾಜ್ಯದ ಶಾಂತಿ ಕದಡುವ ಈ ಕಿಡಿಗೇಡಿ ಕ್ರಿಮಿಗಳನ್ನು ತಕ್ಷಣವೇ ಮಟ್ಟಹಾಕಬೇಕು ಎಂದು ಬೋಪಯ್ಯ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!