ನೂಪುರ್‌ ಶರ್ಮಾ ಮೇಲೆ ಮತ್ತೊಂದು ಕೇಸ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರವಾದಿ ಮೊಹಮದ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರ ಮೇಲೆ ಇನ್ನೊಂದು ಕೇಸ್‌ ದಾಖಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂಪುರ್‌ ಶರ್ಮಾ ಅವರ ಮೇಲೆ ಎರಡು ಪ್ರಕರಣಗಳು ದಾಖಲಾಗಿದ್ದು ಈಗ ಮೂರನೇ ಪ್ರಕರಣ ಹಾಕಲಾಗಿದೆ. ಎನ್‌ಸಿಪಿ ನಾಯಕರೊಬ್ಬರ ದೂರಿನ ಆಧಾರದ ಮೇಲೆ ಪುಣೆಯ ಕೊಂಢ್ವಾ ಪೋಲೀಸರು ಪ್ರಕರಣ ದಾಖಲಿಸಿದ್ಧಾರೆ.

ಈ ಹಿಂದೆ ನೂಪುರ್‌ ಶರ್ಮಾ ಅವರ ಎಡಿಟೆಡ್‌ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗಿದ್ದು ತನಗೆ ಕೊಲೆ, ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ ಎಂದು ನೂಪುರ್‌ ಶರ್ಮಾ ಕಳವಳ ವ್ಯಕ್ತಪಡಿಸಿದ್ದರು. ಸೈಬರ್‌ ಪೋಲೀಸರಿಗೆ ದೂರು ಕೂಡಾ ನೀಡಿದ್ದರು. ಆದರೆ ವಿಪರ್ಯಾಸ ವೆಂಬಂತೆ ಅವರ ಮೇಲೆಯೇ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಸ್ತುತ ಅವರ ಮೇಲೆ ಮೂರನೇ ಕೇಸ್‌ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!