ಪಾಸ್​ಪೋರ್ಟ್​ ಮರೆತು ಬಂದ KGF ನಟಿ: ಏರ್​ಪೋರ್ಟ್ ನಲ್ಲಿ ಅಂದ್ರು ನೋ ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್ ನಟಿ ಮೌನಿ ರಾಯ್ ರಾಯ್​ (Mouni Roy) ಸಿನಿಮಾ ವಿಷಯಕ್ಕೆ ಹೊರತಾಗಿ ಸಕತ್​ ಸುದ್ದಿಯಾಗುತ್ತಿದ್ದಾರೆ.
ಈಕೆ ವಿಮಾನದಲ್ಲಿ ಪ್ರಯಾಣಿಸಲು ಏರ್​ಪೋರ್ಟ್​ಗೆ ಹೋಗಿದ್ದಾಗ ಪಾಸ್​ಪೋರ್ಟ್​ ಅನ್ನೇ ಮರೆತು ಹೋಗಿದ್ದಾರೆ.

ಆಗಾಗ್ಗೆ ವಿದೇಶಗಳಿಗೆ ಹೋಗುತ್ತಿರುವ ನಟಿ ಮೌನಿ ರಾಯ್​ ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಈ ಸಮಯದಲ್ಲಿಯೇ ಅವರು ಪಾಸ್​ಪೋರ್ಟ್​ ತರಲು ಮರೆತಿರುವ ವಿಷಯ ತಿಳಿದಿದೆ.
ರೂಲ್ಸ್​ ಎಲ್ಲರಿಗೂ ಒಂದೇ. ಇಲ್ಲಿ ನಟಿಯಾದರೇನು, ಯಾರಾದರೇನು? ಮೌನಿ ರಾಯ್​ ಅವರಿಗೆ ಅಲ್ಲಿದ್ದ ಏರ್​ಪೋರ್ಟ್​ ಸಿಬ್ಬಂದಿ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ.

ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದ ಸಮಯದಲ್ಲಿಯೇ ಗೇಟ್​ನಲ್ಲಿ ಇದ್ದ ಣ ಸಿಬ್ಬಂದಿ ಪಾಸ್​ಪೋರ್ಟ್​ ತೋರಿಸುವಂತೆ ಹೇಳಿದ್ದಾರೆ. ಪಾಸ್​ಪೋರ್ಟ್​ (Passport) ತಂದಿರುವ ಸಂಪೂರ್ಣ ಕಾನ್​ಫಿಡೆನ್ಸ್​ನಿಂದ ನಟಿ ಮತ್ತು ಆಕೆಯ ಸಹೊದ್ಯೋಗಿ ಬ್ಯಾಗ್​ ಪೂರ್ತಿ ಹುಡುಕಾಡಿದ್ದಾರೆ. ಆದರೆ ಅವರಿಗೆ ಅದು ಸಿಗಲಿಲ್ಲ.
ಆದರೆ ಕೊನೆಗೆ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಗಿದ್ದು, ಮೌನಿ ರಾಯ್​ ವಾಪಸ್​ ಮನೆಗೆ ಹೋಗಿರುವುದಾಗಿ ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!