ಒಡಿಶಾ ರೈಲು ದುರಂತದ ತನಿಖೆ ಚುರುಕು: 7 ರೈಲ್ವೇ ಸಿಬ್ಬಂದಿ ಅಮಾನತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಒಡಿಶಾ ರೈಲು ದುರಂತದ ತನಿಖೆಯೂ ತೀವ್ರಗೊಂಡಿದೆ. ಸಿಬಿಐ ಅಧಿಕಾರಿಗಳು ಪ್ರಕರಣ ಇಂಚಿಂಚು ಮಾಹಿತಿ ಕಲೆಹಾಕುತ್ತಿದ್ದಾರೆ. ಈಗಾಗಲೇ ಮೂವರು ರೈಲ್ವೇ ಅಧಿಕಾರಿಗಳನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. ಇದೀಗ 7 ರೈಲ್ವೇ ಸಿಬ್ಬಂದಿಯನ್ನು ಇಲಾಖೆ ಅಮಾನತು ಮಾಡಿದೆ.

ಸ್ಟೇಶನ್ ಮಾಸ್ಟರ್, ಟ್ರಾಫಿಕ್ ಇನ್ಸ್‌ಪೆಕ್ಟರ್, ನಿರ್ವಹಣಗಾರ ಸೇರಿದೆಂತೆ 7 ಮಂದಿ ಇದೀಗ ಅಮಾನತ್ತಾಗಿದ್ದಾರೆ.

ಸ್ಟೇಶನ್ ಮಾಸ್ಟರ್, ಟ್ರಾಫಿಕ್ ಇನ್ಸ್‌ಪೆಕ್ಟರ್, ನಿರ್ವಹಣಗಾರ ಗೂಡ್ಸ್ ರೈಲು ನಿಂತಿರುವ ಸೂಚನೆಯನ್ನು ನೀಡಿದ್ದರೆ, ಮಹಾ ದುರಂತ ತಪ್ಪಿಸಲು ಸಾಧ್ಯವಾಗುತ್ತಿತ್ತು. ಕನಿಷ್ಠ ಪಕ್ಷ ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗುತ್ತಿತ್ತು. ಆದರೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿಲ್ಲ ಎಂದು ರೈಲ್ವೇ ಇಲಾಖೆ ಸಿಬ್ಬಂದಿಗಳನ್ನು ಅಮಾನತು ಮಾಡಿದೆ.

ಸೌತ್ ಈಸ್ಟರ್ನ್ ರೈಲ್ವೇ ಜನರಲ್ ಮ್ಯಾನೇಜರ್ ಇಂದು ಬಾಲಾಸೋರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಗೋಪಿನಾಥ್‌ಪುರ ರೈಲ್ವೇ ನಿಲ್ದಾಣಕ್ಕೂ ಭೇಟಿ ನೀಡಿದ್ದಾರೆ. ರೈಲ್ವೇ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಘಟನೆಯನ್ನು ತಪ್ಪಿಸಲು ಅವಕಾಶಗಳಿತ್ತು. ಆದರೆ ಸಿಬ್ಬಂದಿಗಳು ಕರ್ತವ್ಯ ಮಾಡಿಲ್ಲ ಎಂದು ಜನರಲ್ ಮ್ಯಾನೇಜರ್ ರೈಲ್ವೇ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ.

ಇದಕ್ಕೂ ಮೊದಲು ಸಿಬಿಐ ಹಿರಿಯ ರೈಲ್ವೇ ಅಧಿಕಾರಿಗಳಾದ ಸೆಕ್ಷನ್ ಎಂಜಿನೀಯರ್ ಮೊಹಮ್ಮದ್ ಅಮಿರ್ ಖಾನ್, ಸೆಕ್ಷನ್ ಸಿಗ್ನಲ್ ಎಂಜಿನಿಯರ್ ಅರುಣ್ ಕುಮಾರ್ ಮಹಾಂತ, ತಾಂತ್ರಿಕ ಸಿಬ್ಬಂದಿ ಪಪ್ಪು ಕುಮಾರ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

ಇತ್ತೀಚೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಆಂತರಿಕ ವರದಿ ನೀಡಿ, ‘ರೈಲು ದುರಂತವು ದುಷ್ಕೃತ್ಯವಲ್ಲ. ಬದಲಗಿ ರೈಲ್ವೆ ಸಿಗ್ನಲಿಂಗ್‌ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಅಪಘಾತ ಸಂಭವಿಸಿದೆ. ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ಕೊಂಚ ಮಾರ್ಪಾಟು ಮಾಡಿದ ನಂತರ ಅವುಗಳ ಸೂಕ್ತ ತಪಾಸಣೆಯನ್ನು ಮೇಲಧಿಕಾರಿಗಳು ಮಾಡಿರಲಿಲ್ಲ. ಈ ಮುಂಚೆ ಬಾಹಾನಗಾ ಸ್ಟೇಷನ್‌ ಮಾಸ್ಟರ್‌ ಅವರು ಸಿಗ್ನಲಿಂಗ್‌ನಲ್ಲಿ ವ್ಯತ್ಯಾಸವಿದೆ ಎಂದು ದೂರು ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!