Wednesday, June 29, 2022

Latest Posts

ಅಮೆಜಾನ್‌ ಒಟಿಟಿ ಫ್ಲಾಟ್‌ಫಾರ್ಮ್‌ಗೆ ರಾಕಿಭಾಯ್‌ ಎಂಟ್ರಿ, ರಿಲೀಸ್‌ ಯಾವಾಗ ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ದಿ ಮೋಸ್ಟ್ ವೇಟೆಡ್ ಮೂವಿ ‘ಕೆಜೆಎಫ್ ಚಾಪ್ಟರ್ 2’ ಬಿಡುಗಡೆಯೊಂದಿಗೆ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ‌ ಧೂಳೆಬ್ಬಿಸುತ್ತಿದೆ. ಈಗಾಗಲೇ ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಜೆಎಫ್-2 ಭವಿಷ್ಯದಲ್ಲಿ ಯಾವ ರೀತಿಯ ದಾಖಲೆಗಳನ್ನು ಸೃಷ್ಟಿಸಲಿದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಚಿತ್ರವು ಪ್ರಪಂಚದಾದ್ಯಂತದ ಹಲವು ಥಿಯೇಟರ್‌ಗಳಲ್ಲಿ ತೆರೆ ಕಂಡಿದೆ. ಚಿತ್ರವನ್ನು ಈಗಾಗಲೇ ವಿತರಕರು ಭಾರಿ ದರದಲ್ಲಿ ಖರೀದಿಸಿದ್ದಾರೆ. ಇದೀಗ ಕೆಜಿಎಫ್- 2ನ ಒಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ಪಡೆದುಕೊಂಡಿರುವುದಾಗಿ ಚಿತ್ರತಂಡ ಪ್ರಕಟಿಸಿದೆ. ಸ್ಯಾಟಲೈಟ್ ಹಕ್ಕುಗಳನ್ನು ʻಝೀʼ ಸ್ವಂತ ಮಾಡಿಕೊಂಡಿದೆ. ಅಮೆಜಾನ್ ಪ್ರೈಮ್ ಚಿತ್ರದ OTT ಹಕ್ಕುಗಳನ್ನು ಜನರು ದಿಗ್ಭ್ರಮೆಗೊಳಿಸುವ ದರದಲ್ಲಿ ಖರೀದಿಸಿದೆ ಎಂದು ಚಲನಚಿತ್ರ ಮೂಲಗಳು ಹೇಳುತ್ತವೆ. ಆದರೆ ಸ್ಪಷ್ಟವಾದ ಅಂಕಿ ಅಂಶ ಇನ್ನೂ ತಿಳಿದುಬಂದಿಲ್ಲ.

ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದು, ಬಾಲಿವುಡ್ ನಟ ಸಂಜಯ್ ದತ್ ಮತ್ತು ರವೀನಾ ಟಂಡನ್ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿರುವ ಕೆಜಿಎಫ್-2 ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಭಾರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿರುವ ದಿನಾಂಕದ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss