Sunday, September 25, 2022

Latest Posts

ಹೊಸ ಫೋಟೋ ಶೂಟ್‌ ನಲ್ಲಿ ಮಿಂಚುಹರಿಸಿದ ಯಶ್‌- ರಾಧಿಕಾ

ಹೊಸದಿಗಂತ ದಿಗಂತ ಡಿಜಿಟಲ್‌ ಡೆಸ್ಕ್‌
ತಾರಾ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಆಗಾಗ್ಯೆ ಸರ್ಪ್ರೈಜ್‌ ನೀಡುತ್ತಲೇ ಇರುತ್ತಾರೆ. ಸೆಪ್ಟೆಂಬರ್ 15 ರಂದು, ರಾಧಿಕಾ ಪಂಡಿತ್ ತಮ್ಮ ಮತ್ತು ಯಶ್ ಅವರ ಕೆಲವು ಅದ್ಭುತ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ. ರಾಧಿಕಾ ಪಂಡಿತ್ ಹಾಗೂ ಯಶ್ ಸೈಮಾ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆ ಸಂದರ್ಭದಲ್ಲಿ ತೆಗೆದ ಫೊಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ರಾಧಿಕಾ ಅತ್ಯಾಕರ್ಷಕ ಸೀರೆಯಲ್ಲಿ ಕಂಗೊಳಿಸಿದರೆ, ಯಶ್ ಕಪ್ಪು ಹಿನ್ನೆಲೆಯಲ್ಲಿ ಬಿಳಿಯ ಶೆರ್ವಾನಿಯಲ್ಲಿ ಮಿಂಚಿದ್ದಾರೆ.

ಇನ್‌ಸ್ಟಾಗ್ರಾಮ್‌ಗೆ ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್, ತಮ್ಮನ್ನು ಚೆಂದವಾಗಿ ಕಾಣುವಂತೆ ಮಾಡಿದ ಮೇಕಪ್‌ ಆರ್ಟಿಸ್ಟ್‌ ಗಳ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಕೆಜಿಎಫ್ ಚಾಪ್ಟರ್ 1 ಮತ್ತು 2 ಭರ್ಜರಿ ಯಶಸ್ಸು ಯಶ್ ರನ್ನು ಖ್ಯಾತಿಯ ಉತ್ತುಂಗಕ್ಕೆ ಏರಿಸಿದೆ. ಅಭಿಮಾನಿಗಳು ಯಶ್‌ ಅವರ ಅವರ ಮುಂದಿನ ಚಿತ್ರದ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಮಕ್ಕಳಾದ ಆಯ್ರಾ ಹಾಗೂ ಅಥರ್ವರ ಪಾಲನೆಯತ್ತ ಹೆಚ್ಚಿನ ಗಮನ ಹರಿಸಿರುವ ರಾಧಿಕಾ ಪಂಡಿತ್ ಸಿನಿಮಾದಿಂದ ವಿರಾಮ ಪಡೆದುಕೊಂಡಿದ್ದಾರೆ. ಚಿತ್ರರಂಗಕ್ಕೆ ಅವರ ಪುನರಾಗಮನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!