ಹಾಡಹಗಲೇ ಮನೆ ಬೀಗ ಮುರಿದು 1.80 ಕೋಟಿ ನಗದು, ಚಿನ್ನಾಭರಣ ದೋಚಿದ ಖದೀಮರು

ಹೊಸದಿಗಂತ ವರದಿ,ಮೈಸೂರು:

ಹಾಡಹಗಲೇ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ೧.೮೦ ಕೋಟಿ ನಗದು ಹಾಗೂ ೪೪೦ ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

ಫರ್ಟಿಲೈಸರ್ ಅಂಗಡಿ ಮಾಲೀಕ ಗಿರೀಶ್ ಎಂಬುವರಿಗೆ ಸೇರಿದ ಮನೆಯಲ್ಲಿ ಕೃತ್ಯ ನಡೆದಿದೆ.
ಗಿರೀಶ್ ಸಂಬoಧಿಕರಿoದ ಜಮೀನು ಖರೀದಿಗಾಗಿ ಸಾಲ ಮಾಡಿ ಮನೆಯಲ್ಲಿ ೧.೮೦ ಕೋಟಿ ರೂ ಹಣ ಇಟ್ಟಿದ್ದರೆಂದು ಹೇಳಲಾಗಿದೆ. ಅವರು ಅಂಗಡಿಯಲ್ಲಿ ಇದ್ದ ವೇಳೆ ಪತ್ನಿ ಹಾಗೂ ಮಗಳು ಸ್ವಂತ ಊರಾದ ಕೊಯಮತ್ತೂರು ಕಾಲೋನಿಗೆ ತೆರಳಿದ್ದಾರೆ.ಇದೇ ಸಂದರ್ಭ ಬಳಸಿಕೊಂಡ ಖದೀಮರು ಮನೆಯ ಹಿಂಬಾಗಿಲು ಮುರಿದು ಕೃತ್ಯವೆಸಗಿದ್ದಾರೆ.

ವಿಷಯ ತಿಳಿದು ಘಟನೆ ನಡೆದ ಸ್ಥಳಕ್ಕೆ ಬೆರಳುಮುದ್ರೆ ಘಟಕದ ಸಿಬ್ಬಂದಿಗಳು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹುಣಸೂರು ಟೌನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!