ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂದೆ-ತಾಯಿ ಜೀವನವಿಡೀ ದುಡಿದು ಮಗಳ ಮದುವೆಗಾಗಿ ಕೂಡಿಟ್ಟಿದ್ದ ಚಿನ್ನ, ಹಣವನ್ನ ಕ್ಷಣಮಾತ್ರದಲ್ಲಿ ಕಳ್ಳರು ಎಸ್ಕೇಪ್ ಮಾಡಿದ್ದಾರೆ!
ಬೆಂಗಳೂರಿನ ತಿಲಕ್ ನಗರದ ಎಸ್‌ಆರ್‌ಕೆ ಗಾರ್ಡನ್‌ನಲ್ಲಿರುವ ಮನೆಯಲ್ಲಿ ಮಗಳ ಮದುವೆಗೆ ತಂದಿಟ್ಟಿದ್ದ ಬಂಗಾರ, ನಗದು ಇಡಲಾಗಿತ್ತು. ಕೆಲಸದ ಮೇಲೆ ಇಡೀ ಕುಟುಂಬ ರಾಮನಗರಕ್ಕೆ ಹೋದಾಗ ಕಳ್ಳ ಬೀಗ ಮುರಿದು 3.5 ಕೆಜಿ ಚಿನ್ನ, 10 ಲಕ್ಷ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾನೆ.
ರಾಮನಗರದಿಂದ ಮನೆಗೆ ಬಂದು ನೋಡಿದ ಕುಟುಂಬದವರಿಗೆ ಶಾಕ್ ಆಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬ ಮನೆಗೆ ಬಂದಿರುವುದು ಕಾಣಿಸಿದೆ. ಪೊಲೀಸರು ಕಳ್ಳನ ಹುಡುಕಾಟದಲ್ಲಿದ್ದಾರೆ.