ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ಪೊಲೀಸರು ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ದೋಷಾರೋಪ ಪಟ್ಟಿಯ ಪ್ರಮುಖ ಭಾಗಗಳು ಒಂದರ ಹಿಂದೆ ಒಂದರಂತೆ ಬಹಿರಂಗಗೊಳ್ಳುತ್ತಿವೆ.
ಸದ್ಯ ಪೊಲೀಸರು ಕೆಲ ಫೋಟೋಗಳು ಹಾಗೂ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಕೊಲೆಗೂ ಮುನ್ನ ರೇಣುಕಾ ಸ್ವಾಮಿ ಕೈಮುಗಿದು ಬೇಡಿಕೊಂಡಿದ್ದ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದೀಗ ದರ್ಶನ್ರ ಚಿತ್ರವೊಂದು ಸಹ ವೈರಲ್ ಆಗಿದೆ.
ದರ್ಶನ್ ಮತ್ತು ಇತರ ಆರೋಪಿಗಳ ಬಂಧನದ ನಂತರ, ಪೊಲೀಸರು ಸ್ಥಳ ಮಹಜರು ಮಾಡಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಟ ದರ್ಶನ್ ಮತ್ತು ಆರೋಪಿಗಳಾದ ವಿನಯ್, ಪ್ರದೋಶ್ ಕೂಡ ಇದ್ದಾರೆ. ವಿಶೇಷವೆಂದರೆ ಆರೋಪಿ ಜೊತೆ ನಟ ಚಿಕ್ಕಣ್ಣ ಕೂಡ ಚಿತ್ರದಲ್ಲಿದ್ದಾರೆ.