ಮೊದಲ ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ (Amritpal Singh) ಇಂದುವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.ಇದರಲ್ಲಿ ಸಿಂಗ್ ಪಂಜಾಬ್ ಪೊಲೀಸರನ್ನು(Punjab police) ತರಾಟೆಗೆ ತೆಗೆದುಕೊಂಡಿದ್ದು, ಪಂಜಾಬ್ (Punjab) ಸರ್ಕಾರಕ್ಕೆ ತನ್ನನ್ನು ಬಂಧಿಸುವ ಉದ್ದೇಶವಿದ್ದರೆ ಪೊಲೀಸರು ತಮ್ಮ ಮನೆಗೆ ಬರಬಹುದಿತ್ತು ಎಂದಿದ್ದಾರೆ.

ಅಮೃತಪಾಲ್ ಸಿಂಗ್ ಬೈಸಾಖಿಯ ಸಂದರ್ಭದಲ್ಲಿ ಸರ್ಬತ್ ಖಾಲ್ಸಾಗೆ (ಸಿಖ್ ಧಾರ್ಮಿಕ ಸಭೆ) ಕರೆ ನೀಡಿದ್ದು ಅವರ ಸಹಾಯಕರ ಬಂಧನ ಮತ್ತು ಅಸ್ಸಾಂ ಜೈಲಿನಲ್ಲಿ ಅವರನ್ನು ಬಂಧಿಸಿರುವ ಬಗ್ಗೆ ಮಾತನಾಡಿದ್ದಾರೆ. ಜನರು ಒಗ್ಗೂಡುವಂತೆ ಕರೆ ನೀಡಿದ ಅಮೃತಪಾಲ್, ತಾನು ಈವರೆಗೆ ಬಂಧಿತನಾಗಿಲ್ಲ ಎಂದಿದ್ದಾರೆ.
ಪ್ರತ್ಯೇಕತಾವಾದಿ ನಾಯಕ ಪಂಜಾಬ್ ಪೊಲೀಸರ ಮುಂದೆ ಮೂರು ಷರತ್ತುಗಳನ್ನು ಮುಂದಿಟ್ಟಿದ್ದಾನೆ .

ತನ್ನನ್ನು ಕಸ್ಟಡಿಗೆ ತೆಗೆದುಕೊಂಡರೆ ತಾನು ಪೊಲೀಸರಿಗೆ ಶರಣಾಗಿದ್ದೇನೆ ಎಂದು ಪರಿಗಣಿಸಬೇಕು, ಬಂಧಿತನಾಗಿದ್ದಾನೆ ಎಂದು ಹೇಳಬಾರದು. ಪಂಜಾಬ್‌ನ ಜೈಲಿನಲ್ಲಿ ಇರಿಸಬೇಕು. ಕಸ್ಟಡಿಯಲ್ಲಿ ಹೊಡೆಯಬಾರದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಮಾರ್ಚ್ 18 ರಂದು ಪಂಜಾಬ್ ಪೊಲೀಸರು ತನ್ನ ಮತ್ತು ಸಂಘಟನೆಯ ಮೇಲೆ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಸಿಂಗ್ ನೀಡಿದ ಮೊದಲ ವಿಡಿಯೊ ಹೇಳಿಕೆ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!