ಲಾಹೋರ್​ನಲ್ಲಿ ಖಲಿಸ್ತಾನಿ ಉಗ್ರ ಪರಮ್​ಜಿತ್ ಸಿಂಗ್​ನನ್ನು ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಾಹೋರ್​ನಲ್ಲಿ ಖಲಿಸ್ತಾನಿ(Khalistani) ಉಗ್ರ(Terrorist) ಪರಮ್​ಜಿತ್ ಸಿಂಗ್​ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ವಾಂಟೆಡ್ ಖಲಿಸ್ತಾನಿ ಭಯೋತ್ಪಾದಕ ಪರಮ್​ಜಿತ್ ಸಿಂಗ್​ ಬೆಳಗ್ಗೆ ವಾಕಿಂಗ್​ ತೆರಳಿದ್ದಾಗ ಅಪರಿಚಿತ ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

63 ವರ್ಷದ ಪಂಜ್ವಾರ್ ಅವರು ಖಲಿಸ್ತಾನ್ ಕಮಾಂಡೋ ಫೋರ್ಸ್-ಪಂಜ್ವಾರ್ ಗುಂಪಿನ ಮುಖ್ಯಸ್ಥರಾಗಿದ್ದರು ಮತ್ತು ಜುಲೈ 2020 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಭಾರತವು ಭಯೋತ್ಪಾದಕ ಎಂದು ಹೆಸರಿಸಿತ್ತು.

ಬಂದೂಕುಧಾರಿಗಳು ಅವರ ತಲೆಗೆ ಗುಂಡು ಹಾರಿಸಿದ್ದಾರೆ, ISI, ಮಿಲಿಟರಿ ಗುಪ್ತಚರ (MI) ಮತ್ತು ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಸೇರಿದಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಈ ಪ್ರದೇಶವನ್ನು ಸುತ್ತುವರೆದಿವೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!