ಕರ್ನಾಟಕದಲ್ಲಿ ದಾಖಲೆ ಬರೆದ ಪ್ರಧಾನಿ ರೋಡ್ ಶೋ: ಸಿಲಿಕಾನ್ ಸಿಟಿಯ ಜನತೆಯ ಪ್ರೀತಿಗೆ ತಲೆಬಾಗಿದ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ (Bengaluru) 2ನೇ ದಿನವೂ ಮೋದಿ ರೋಡ್ ಶೋ ಭರ್ಜರಿಯಾಗಿ
ನಡೆದಿದೆ.
ಇಂದುನ್ಯೂ ತಿಪ್ಪಸಂದ್ರದಿಂದ ಪ್ರಾರಂಭವಾಗಿದ್ದ ಶಾಂತಿನಗರದಲ್ಲಿ ಪ್ರಧಾನಿಮೋದಿ (Narendra Modi) ಅವರ ರೋಡ್ ಶೋ (Road Show) ಅಂತ್ಯಗೊಂಡಿದ್ದು, ಜನರಿಂದ ಅದ್ಬುತ ಪ್ರತಿಕ್ರಿಯೆ ಬಂದಿದೆ.

ಚುನಾವಣೆಗೆ ಇನ್ನೆನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಧಾನಿಮೋದಿ ಅವರು ಭರ್ಜರಿ ಕಮಾಲ್ ಮಾಡಿದ್ದಾರೆ. ಮೊದಲ ಬಾರಿಗೆ ಕನ್ನಡನಾಡಿನಲ್ಲಿ ಪ್ರಧಾನಿಯೊಬ್ಬರು 2 ದಿನಗಳ ಕಾಲ ಅತಿದೊಡ್ಡ ರೋಡ್ ಶೋ ಮಾಡಿ ದಾಖಲೆ ಬರೆದಿದ್ದಾರೆ. ಸತತ 2 ದಿನಗಳ ಕಾಲ ನಡೆಸಿದ ರೋಡ್ ಶೋನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಇಂದು 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ದೂರದವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್ ಶೋ ನಡೆದಿದೆ. ಮಹಾದೇವಪುರ, ಕೆ.ಆರ್ ಪುರಂ, ಸಿವಿ ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗುತ್ತಿದೆ. ತಿಪ್ಪಸಂದ್ರ ಬಳಿ ಕೆಂಪೇಗೌಡ ಪ್ರತಿಮೆಗೆ ಪುಷ್ಪ ಹಾಕಿ ಮೋದಿ ರೋಡ್ ಶೋ ಆರಂಭಿಸಿದ್ದರು.
ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆದಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸಿ ನೆರೆದಿದ್ದವರನ್ನು ಹುರಿದುಂಬಿಸಿದರು. ಮೋದಿಯನ್ನು ಸ್ವಾಗತಿಸಲು ಜಿಟಿ ಜಿಟಿ ಮಳೆಯಲ್ಲೂ ಹೆಚ್ಚಿನ ಜನರು ಸಂಭ್ರಮದಿಂದ ಸೇರಿದ್ದರು. ರಸ್ತೆಯುದ್ದಕ್ಕೂ ಕೇಸರಿ ಬಾವುಟ ಹಾರಾಟವಿದ್ದು, ಸಾವಿರಾರು ಜನರು ಸೇರಿ ಮೋದಿಯನ್ನು ನೋಡಿ ಸಂತಸಪಟ್ಟರು. ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಮೋದಿಯನ್ನು ವೀಕ್ಷಿಸಲು ನೆರೆದಿದ್ದರು.

ಮೋದಿ ರೋಡ್ ಶೋಗೆ ಬಿಜೆಪಿ (BJP) ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಈ ವೇಳೆ ಜನರೆಡೆಗೆ ಮೋದಿ ಅವರು ಹೂ ಎಸೆದು ನಗೆ ಬೀರಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿತ್ತು.

ಪ್ರಧಾನಿ ಮೋದಿ ಮೂರು ಹಂತದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ. ಏಪ್ರಿಲ್ 29 ರಂದು ಮಾಗಡಿ ನೈಸ್ ರಸ್ತೆಯಿಂದ ಸುಮನಹಳ್ಳಿಯವರೆಗೆ 4.5 ಕಿ.ಮೀ, ಮೇ 06 ರಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕೋಣಕುಂಟೆಯಿಂದ ಮಲ್ಲೇಶ್ವರದವರೆಗೆ 27 ಕಿ.ಮೀ. ಇಂದು 6.5 ಕಿ.ಮೀ ಒಟ್ಟು ಸುಮಾರು 38 ಕಿ.ಮೀ ರೋಡ್ ಶೋ ನಡೆಸಿದ್ದಾರೆ.

ಕರ್ನಾಟಕದ ಮಟ್ಟಿಗೆ ಇದು ರಾಷ್ಟ್ರೀಯ ನಾಯಕರೊಬ್ಬರು ನಡೆಸಿದ ಅತಿದೊಡ್ಡ ರೋಡ್ ಶೋ ಆಗಿದೆ. ಪ್ರಧಾನ ಮೋದಿ ಅವರು ಕಳೆದ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ 50ಕಿ.ಮೀ ಉದ್ದದ ರೋಡ್ ಶೋ ನಡೆಸಿದ್ದರು. ಅದಾದ ಬಳಿಕ ಅವರು ನಡೆಸಿದ 2ನೇ ಅತಿದೊಡ್ಡ ರೋಡ್ ಶೋ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!