Saturday, June 10, 2023

Latest Posts

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗೆ ಪತ್ರ ಬರೆದ ಖರ್ಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದ್ದಾರೆ.

ತಮ್ಮ ಕಲ್ಯಾಣ ಕರ್ನಾಟಕದ ಬೀದರ್ (Bidar) ಮತ್ತು ಕಲಬುರಗಿಯಿಂದ (Kalaburagi) ಬೆಂಗಳೂರಿಗೆ (Bengaluru) ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ವಿನಂತಿಸಿಕೊಂಡಿದ್ದಾರೆ.
ಪ್ರಯಾಣಿಕರ ಸಂಖ್ಯೆಯ ಹೆಚ್ಚಳವಾಗಿರುವುದರಿಂದ ಈ ಎರಡೂ ನಗರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಬೀದರ್, ಕಲಬುರಗಿಯಿಂದ ಬೆಂಗಳೂರಿಗೆ ಈಗ ಚಾಲ್ತಿಯಲ್ಲಿರುವ ರೈಲುಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ಸಾಕಷ್ಟು ರಶ್ ಉಂಟಾಗುತ್ತಿದೆ. ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವಿಶೇಷವಾಗಿ ಮೀಸಲು ರಹಿತ ಬೋಗಿಗಳಲ್ಲಿ ಭಾರೀ ಸಮಸ್ಯೆಯಾಗುತ್ತಿದ್ದು, ಈ ಬೋಗಿಗಳು ತುಂಬಿರುತ್ತವೆ. ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯ 6 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ. ಹಾಗಾಗಿ, ಬಹಳಷ್ಟು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಗಳಿಗೆ ನುಗ್ಗುತ್ತಿದ್ದಾರೆ. ಈ ಬೋಗಿಗಳಲ್ಲಿ ನೆಲದ ಮೇಲೆ ಮಲಗಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಜನರಲ್ ಬೋಗಿಗಳಲ್ಲಿ ಕಾಲಿಡಲು ಆಗುವುದಿಲ್ಲ. ಅಷ್ಟು ರಶ್ ಇರುತ್ತದೆ ಎಂಬ ಸಂಗತಿಯನ್ನು ರೈಲು ಸಚಿವರಗಮನಕ್ಕೆ ತರಲು ಬಯಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸಲು ರೈಲು ಸಚಿವರು ಮಧ್ಯ ಪ್ರವೇಶಿಸಿ, ಮಧ್ಯಂತರ ಪರಿಹಾರವಾಗಿ ಕೂಡಲೇ ಕಲಬುರಗಿಯಿಂದ ಎರಡು ಮತ್ತು ಬೀದರ್‌ನಿಂದ ಒಂದ ಹೆಚ್ಚುವರಿ ರೈಲು ಓಡಿಸುವ ಪ್ರಯತ್ನ ಮಾಡಬೇಕು. ವಾಸ್ತವದಲ್ಲಿ ಬೀದರ್ ಮತ್ತು ಬೆಂಗಳೂರು ನಡುವೆ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ. ಈ ಎರಡು ನಗರಗಳಿಗೆ ಕಾಯ್ದಿರಿಸಿದ ಕೋಟಾ ಅಗತ್ಯಕ್ಕಿಂತ ತುಂಬಾ ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಕಲಬುರಗಿಯಿಂದ ಎರಡು ಹೊಸ ರೈಲುಗಳು ಮತ್ತು ಬೀದರ್‌ನಿಂದ ಬೆಂಗಳೂರಿಗೆ ಇನ್ನೂ ಒಂದು ರೈಲು ತುರ್ತಾಗಿ ಓಡಿಸುವ ಅವಶ್ಯಕತೆಯಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!