ಹೊಸದಿಗಂತ ವರದಿ,ಬೀದರ್:
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ನಡುವೆ ವಾಕ್ಸಮರ ಮುಂದುವರೆದಿದೆ, ಕಳೆದ ದಿವಸ ಈಶ್ವರ ಖಂಡ್ರೆ ಪ್ರಚಾರದ ವೇಳೆ ಕೇಂದ್ರ ಸಚಿವ ಖೂಬಾ ಭ್ರಷ್ಟ ರಾಜಕಾರಣಿ ಎಂದು ಹೇಳಿಕೆ ನೀಡಿದ್ದರು ಅದಕ್ಕೆ ಪ್ರತ್ಯುತ್ತರವಾಗಿ ಸಚಿವ ಭಗವಂತ ಖೂಬಾ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈಶ್ವರ ಖಂಡ್ರೆಯವರು, ಕಾಂಗ್ರೇಸ್ ಕಾರ್ಯಾಧ್ಯಕ್ಷರಾದ ಮೇಲೆ ನಿಜವಾಗಿಯೂ ಮಾನಸಿಕ ಸಿಮಿತ ಕಳೆದುಕೊಂಡು ಬಿಟ್ಟಿದ್ದಾರೆ, ಅವರು ಏನು ಮಾತಾಡುತ್ತಿದ್ಧಾರೋ, ಯಾವ ಆರೋಪ ಮಾಡುತ್ತಿದ್ದಾರೋ ಅವರ ಅರಿವಿಗೆ ಬರುತ್ತಿಲ್ಲವೆಂದು ನನಗನಿಸುತ್ತಿದೆ.
ನಾನು ಇವರ ಕಾಲದಲ್ಲಿ ರಿಂಗ್ ರೋಡ್ ಕಾಮಗಾರಿ ಅಪೂರ್ಣಗೊಂಡಿದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ 13 ಕೋಟಿ ಹಣ ನಷ್ಟವಾಗಿರುವುದು ಸತ್ಯ, ಈ ಸತ್ಯ ಒಪ್ಪಿಕೊಳ್ಳದೆ, ತಲೆ ಬುಡವಿಲ್ಲದ ಮಾತನಾಡುತ್ತಿದ್ದಾರೆ.
ಈಶ್ವರ ಖಂಡ್ರೆಯವರ ಅಹಂಕಾರಕ್ಕೆ, ಹೊಟ್ಟೆ ಕಿಚ್ಚಿಗೆ, ದ್ವೇಷ ರಾಜಕಾರಣದಿಂದಾಗಿ, ಜಿಲ್ಲೆಯ ಎಷ್ಟೋ ಅಧಿಕಾರಿಗಳು, ಇಂಜಿನಿಯರುಗಳು ಬಲಿಪಶುವಾಗಿದ್ದಾರೆ, ಎಷ್ಟೋ ಅಧಿಕಾರಿಗಳ ಪದೊನ್ನತಿ ನಿಂತಿವೆ, ದೊಡ್ಡ ದೊಡ್ಡ ಹುದ್ದೆಗೆ ಎರಬೇಕಾಗದವರು ತನ್ನ ಪದೋನ್ನತಿ ಕಳೆದುಕೊಂಡು, ತನ್ನನ್ನು ಹಾಗೂ ಪರಿವಾರದವರನ್ನು ಕಷ್ಟದಲ್ಲಿ ಸಿಲುಕಿಸಿದ್ದ ಈಶ್ವರ ಖಂಡ್ರೆಯವರ ಮೇಲೆ ಶಾಪ ಹಾಕುತ್ತಿದ್ದಾರೆ. ಎಷ್ಟೋ ಜನರ ನಿವೃತ್ತಿ ವೇತನ ಸಹ ನಿಂತಿದೆ, ಇವರು ಅಧಿಕಾರಿಗಳ ಮಾನ ಹರಾಜು ಹಾಕುವುದರಲ್ಲಿ ನಿಸ್ಸಿಮರು ಎಂದು ತಿಳಿದು, ಅಧಿಕಾರಿಗಳು ಭಾಲ್ಕಿ ತಾಲೂಕಿಗೆ ಪೋಸ್ಟಿಂಗ್ ಹಾಕಿಸಿಕೊಳ್ಳಲು ಹೇದರುತ್ತಾರೆ.
ನಿಮ್ಮ ಪಕ್ಷದ ಹಿರಿಯ ನಾಯಕರಾಗಿದ್ದ ದಿ. ಈಶ್ವರಪ್ಪ ಚಕೋತೆಯವರ ಮೇಲಿನ ದ್ವೇಷದ ಕಾರಣ ಭಾಲ್ಕಿಯಲ್ಲಿರುವ ಅವರ ಸಹೊದರಿಯ ಮನೆಯೂ ಬಿಳಿಸಿದ್ದು ಯಾರೂ ? ನಿಮ್ಮ ಸೋದರಳಿಯನ ಶಾಲೆ ಭಾಲ್ಕಿಯಲ್ಲಿ ಚೆನ್ನಾಗಿ ನಡೆಯುತ್ತಿಲ್ಲವೆನ್ನುವ ಕಾರಣ, ಅಲ್ಲಿದ್ದ ಒಬ್ಬ ಸ್ವಾಮಿಯವರ ಶಾಲೆ ರಾತ್ರೋ ರಾತ್ರಿ ಜೆ.ಸಿ.ಬಿ ಗಳಿಂದ ಬಿಳಿಸಿದ್ದು ಯಾರೂ? ಎಲ್ಲದಕ್ಕೂ ಒಂದೇ ಉತ್ತರ ಈಶ್ವರ ಖಂಡ್ರೆ.
ನೀವು ಜನರ ಮನಸ್ಸು ಗೆದ್ದು ಮತ ಪಡೆಯಲ್ಲ, ಕೇವಲ ಅವರಿಗೆ ಹೆದರಿಸಿ, ಬೆದರಿಸಿ, ಬ್ಲಾಕ್ ಮೇಲೆ ಮಾಡಿ ಗೆಲ್ತಾ ಇದ್ದಿರಿ, ನಿಮ್ಮ ಯೋಗ್ಯತೆಗೆ ಭಾಲ್ಕಿಯಲ್ಲಿ ಒಂದೆ ಒಂದು ಕ್ರೀಡಾಂಗಣ ನಿರ್ಮಿಸಲು ಆಗಿಲ್ಲಾ.
ಇನ್ನು ಶಾಸಕರ ಬೇಡಿಕೆಗೆ ಗುತ್ತಿಗೆದಾರರು ಒಪ್ಪದೆ ಹೊದರೆ, ಗುತ್ತಿಗೆದಾರರು ಮಾಡಿರುವ ಹಳೆಯ ಕಾಮಗಾರಿಯನ್ನು ತೆಗೆದು, ಅದರ ಮಾಹಿತಿ ಪಡೆದುಕೊಂಡು ಅವರ ಮೇಲೆ ದೂರು ನೀಡುವುದು, ಕಪ್ಪು ಪಟ್ಟಿಗೆ ಸೇರಿಸುವಂತೆ ಪತ್ರ ಬರೆಯುವುದು, ಸರ್ಕಾರದ ಮೇಲೆ ಒತ್ತಡ ತರುವುದು ಮಾಡುತ್ತಾರೆ, (ನೀವು ಅಧಿಕಾರಿಗಳು ಹಾಗು ಗುತ್ತಿಗೆದಾರರ ಮೇಲೆ ದ್ವೇಷ ಸಾಧಿಸಿ, ಬರೆದಿರುವ ಪತ್ರಗಳು ತಮಗೆ ಬೇಕಾದರೆ ನಿಮ್ಮ ಮನೆಗೆ ಪೋಸ್ಟ್ ಮಾಡುವೆ) ಇವರಂತಹ ಶಾಸಕರು ರಾಜ್ಯದ ಯಾವೂದೇ ತಾಲೂಕಿನ ಜನತೆಗೂ ಸಿಗಬಾರದು ಎಂದು ಬಯಸುತ್ತೇನೆ. ಇದೇ ತರಹ ಸಂವಿಧಾನಿಕ ಸಂಸ್ಥೆಗಳಾದ ಐ.ಟಿ. ಇಡಿ. ಕಾಂಗ್ರೇಸ್ ಪಕ್ಷದ ಮುಖಂಡರ ಮೇಲೆ ದಾಳಿ ನಡೆಸಿ, ಅವರ ಅಕ್ರಮ ಹೊರತೆಗೆದರೆ ಅದರ ವಿರುದ್ಧ ಪ್ರತಿಭಟನೆ ಮಾಡುತ್ತಿರಿ, ಇದು ಯಾವ ನ್ಯಾಯ? ಗುತ್ತಿಗೆದಾರನಿಗೆ ಒಂದು ನ್ಯಾಯ, ನಿಮ್ಮ ಪಕ್ಷದ ನಾಯಕರಿಗೆ ಒಂದು ನ್ಯಾಯಾನಾ?
ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುವುದು ಒಂದೆ, ಸೂರ್ಯನ ಮೇಲೆ ಉಗುಳುವುದು ಒಂದೆ, ನಾನೇನು ಎಂಬುದು, ನನ್ನ ಬೂತ್ ಮಟ್ಟದ ಕಾರ್ಯಕರ್ತರಿಗೂ ಗೊತ್ತಿದೆ, ಗುತ್ತಿಗೆದಾರರ ಜೊತೆ ವ್ಯವಹಾರ ಇಟ್ಟುಕೊಳ್ಳುವವರು ನೀವು, ಹಾಗಾಗಿಯೇ ಭಾಲ್ಕಿ ತಾಲೂಕಿನ ಎಲ್ಲಾ ಕಾಮಗಾರಿಗಳು ಕೇವಲ 2-3 ಗುತ್ತಿಗೆದಾರರಿಗೆ ನೀಡುತ್ತಾರೆ. ಬೇರೆ ಗುತ್ತಿಗೆದಾರರಿಗೆ ಟೆಂಡರ್ ಸಹ ಹಾಕಲು ಬಿಡುವುದಿಲ್ಲ ಹಾಗಾಗಿನೇ ಇವರು ಪೌರಾಡಳಿತ ಸಚಿವರಿದ್ದಾಗ, ಇವರಿಗೆ ಟೆಂಡರ್ ಮಿನಿಸ್ಟರ್ ಎಂದು ಬಂದಿರುವ ಬಿರುದು ನೆನಪು ಹೊದಂತೆ ಕಾಣುತ್ತದೆ.
ಕೇಂದ್ರದ ಪಿ.ಎಮ್.ಜಿ.ಎಸ್.ವೈ ಕಾಮಗಾರಿಗಳು, ನಬಾರ್ಡ ಕಾಮಗಾರಿಗಳು ಇತರೆ ಯಾವೂದೇ ಕಾಮಗಾರಿಗಳಲ್ಲಿ ಎಲ್ಲಾ ಗುತ್ತಿಗೆದಾರರು ಕೆಲಸ ಮಾಡುತ್ತಿದ್ಧಾರೆ. ನಿಮ್ಮಂತೆ ಬೇರೆಯವರ ಹೊಟ್ಟೆ ಮೇಲೆ ಹೊಡೆದು ನಾನಾಗಲಿ, ನಮ್ಮ ಪಕ್ಷದ ಮುಖಂಡರಾಗಲಿ ಬದುಕುವು ಅವಶ್ಯಕತೆ ನಮಗಿಲ್ಲ.
ಅಕ್ರಮ ಸಂಪತ್ತುಗಳಿಸಿ, ಅದಕ್ಕೆ ಜೈಲ್ (ಬಂದಿಖಾನೆ) ಕಂಪೌಂಡಗಳಂತೆ ಇಪ್ಪತ್ತು ಮೂವತ್ತು ಅಡಿಯ ಸಿಮೆಂಟ ಕಂಪೌಂಡಗಳು ಕಟ್ಟುತ್ತಿರುವವರು ನಿವುಗಳು, ನಿಮ್ಮ ಕುಟುಂಬದವರು, ಆಕ್ರಮ ಆಸ್ತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಪಾದಿಸಿರುವವರು ನೀವು ಹಾಗೂ ನಿಮ್ಮ ಕುಟುಂಬದವರು, ಮುಂದಿನ ದಿನಗಳಲ್ಲಿ ಇವೆಲ್ಲವುಗಳು ಸರ್ಕಾರದ ಪಾಲಾಗಲಿವೆ ಎಚ್ಚರದಿಂದಿರಿ” ಎಂದು ಸಚಿವ ಭಗವಂತ ಖೂಬಾ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.