ಆಕ್ಷನ್ ಕಟ್ ಹೇಳಲು ಕಿಚ್ಚ ರೆಡಿ: ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕೆಆರ್‌ಜಿ ಸಂಸ್ಥೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಸುದೀಪ್ ಮುಂದಿನ ಚಿತ್ರಕ್ಕೆ ಕೆಆರ್‌ಜಿ ನಿರ್ಮಾಣ ಸಂಸ್ಥೆ ಕೈಜೋಡಿಸಿದ್ದಾರೆ.

ಕೆಲ ತಿಂಗಳುಗಳ ಹಿಂದೆ ನಿರ್ಮಾಪಕ ಕಾರ್ತಿಕ್ ಗೌಡ ಜೊತೆಗಿನ ಭೇಟಿಯ ಫೋಟೋ ನೋಡಿ ಒಟ್ಟಿಗೆ ಸಿನಿಮಾ ಮಾಡ್ತಾರೆ ಎಂದು ಸಖತ್ ಸುದ್ದಿಯಾಗಿತ್ತು. ನಿನ್ನೆಯಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡೋದಾಗಿ ಕೆಆರ್‌ಜಿ ಸಂಸ್ಥೆ (Krg Studios) ಘೋಷಣೆ ಮಾಡಿತ್ತು. ಅದರಂತೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ.

ಸುದೀಪ್ ಅವರು ಭಿನ್ನವಾಗಿರುವ ಕಥೆಯೊಂದನ್ನ ಹೆಣೆದಿದ್ದಾರೆ. ತಮ್ಮ ಹೊಸ ಕಥೆಗೆ ಕಿಚ್ಚ ನಿರ್ದೇಶನ ಮಾಡ್ತಿದ್ದಾರೆ. ಸದ್ಯ ಸಣ್ಣ ತುಣುಕೊಂದು ರಿವೀಲ್ ಮಾಡಿದೆ. ಆರಡಿ ಕಟೌಟ್ ಕಿಚ್ಚನ ನೆರಳಿರುವ ಪೋಸ್ಟರ್ ರಿಲೀಸ್ ಕೂಡ ಮಾಡಿದೆ. Kk ಎಂದು ಟೈಟಲ್‌ ಇಡಲಾಗಿದೆ. ಸುದೀಪ್ ಸಿನಿಮಾಗೆ ಕಾರ್ತಿಕ್ ಗೌಡ- ಯೋಗಿ ಜಿ ರಾಜ್ ನಿರ್ಮಾಣ ಮಾಡ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!