ಪ್ರಧಾನಿ ಮೋದಿಯನ್ನು ಸೂರ್ಯನತ್ತ ಕರೆದುಕೊಂಡು ಹೋಗಿ: ಇಸ್ರೋ ಬಳಿ ಲಾಲೂ ಪ್ರಸಾದ್‌ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂದ್ರಯಾನ-3 ಮೂಲಕ ಚಂದ್ರನಲ್ಲಿ ಮಾನವರನ್ನು ಕಳಿಸಿದ್ದಕ್ಕೆ ಇಸ್ರೋ ವಿಜ್ಞಾನಿಗಳನ್ನುಮಾಜಿ ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅಭಿನಂದಿಸಿದ್ದಾರೆ.

ಆದ್ರೆ ಇಸ್ರೋ ಚಂದ್ರಯಾನ-3 ಮಿಷನ್‌ ಮೂಲಕ ಲ್ಯಾಂಡರ್ ಹಾಗೂ ರೋವರ್‌ಅನ್ನು ಚಂದ್ರನ ಮೇಲೆ ಕಳಿಸಿದ್ದು, ಮಾನವರನ್ನು ಅಲ್ಲ ಎಂಬ ಮಾಹಿತಿ ಪ್ರಸಾದ್‌ ಯಾದವ್‌ಗೆ ತಿಳಿಯದೆ ಇರುವುದು ವಿಪರ್ಯಾಸ.

ಮುಂಬೈನಲ್ಲಿ ನಡೆದ ಮೈತ್ರಿಕೂಟದ ಮೂರನೇ ಸಭೆಯ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ವಿಜ್ಞಾನಿಗಳ ಸಾಧನೆಯನ್ನು ಸಾಕಷ್ಟು ಮಂದಿ ಹೊಗಳುತ್ತಿದ್ದಾರೆ. ಚಂದ್ರಯಾನದ ಮೂಲಕ ಮಾನವರು ಚಂದ್ರನ ಮೇಲೆ ಕಾಲಿಟ್ಟಿದ್ದಾರೆ. ಅಲ್ಲಿ ಸಾಕಷ್ಟು ಸುತ್ತಾಟವನ್ನೂ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಅದರ ಬೆನ್ನಲ್ಲಿಯೇ ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳಿಗೆ ನನ್ನದೊಂದಿಗೆ ಮನವಿ ಇದೆ. ಇಸ್ರೋ ತನ್ನ ಮುಂದಿನ ಪ್ರಾಜೆಕ್ಟ್‌ ವೇಳೆ ನರೇಂದ್ರ ಮೋದಿ ಅವರನ್ನು ಕರೆದುಕೊಂಡು ಹೋಗಿ ಸೂರ್ಯನತ್ತ ಕಳಿಸಬೇಕು ಎಂದು ಲೇವಡಿ ಮಾಡಿದ್ದಾರೆ.

ಆಗಸ್ಟ್‌ 23 ರಂದು ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ 3 ನೌಕೆಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೈಯಲ್ಲಿ ತನ್ನ ಸಾಫ್ಟ್‌ ಲ್ಯಾಂಡಿಂಗ್‌ಅನ್ನು ಯಶಸ್ವಿಯಾಗಿ ಮಾಡಿತ್ತು. ಚಂದ್ರಯಾನ 3 ಇಸ್ರೋದ ಮಾನವರಹಿತ ಮಿಷನ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!