August 13, 2026
Thursday, August 13, 2026
spot_img

ಜಪಾನ್ ಓಪನ್‌ನಲ್ಲಿ ಐತಿಹಾಸಿಕ ಜಯಗಳಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ಕಿಚ್ಚ ಸುದೀಪ್‌ ಕಡೆಯಿಂದ ಗಿಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೋಕಿಯೊದಲ್ಲಿ ನಡೆದ ಪ್ರತಿಷ್ಠಿತ ‘ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ-2026’ರಲ್ಲಿ ಭರ್ಜರಿ ಗೆಲುವು ಸಾಧಿಸಿ, ಭಾರತೀಯ ಕ್ರೀಡಾರಂಗದಲ್ಲಿ ಹೊಸ ಇತಿಹಾಸ ಬರೆದಿರುವ ಚಾಂಪಿಯನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ಸ್ಯಾಂಡಲ್‌ವಿಡ್‌ ನಟ ಕಿಚ್ಚ ಸುದೀಪ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಅಭಿಮಾನ ಹಾಗೂ ಗೌರವದ ಸಂಕೇತವಾಗಿ ಕಿಚ್ಚ ಸುದೀಪ್ ಅವರು ವಿಶೇಷವಾಗಿ ಸಿದ್ಧಪಡಿಸಿದ ‘ಗಿಫ್ಟ್ ಹ್ಯಾಂಪರ್’ ಹಾಗೂ ಸ್ವತಃ ಕೈಯಾರೆ ಬರೆದ ಭಾವಪೂರ್ಣ ಪತ್ರವನ್ನು ಕಳುಹಿಸಿಕೊಟ್ಟು ಭಾರತದ ಹೆಮ್ಮೆಯ ಕ್ರೀಡಾಪಟುವನ್ನು ಗೌರವಿಸಿದ್ದಾರೆ.

ಗೌರವಾನ್ವಿತ ಸಿಂಧು ಅವರೇ, ಜಪಾನ್ ಓಪನ್‌ನಲ್ಲಿ ಐತಿಹಾಸಿಕ ಗೆಲುವು ಪಡೆದುಕೊಂಡು, ದಾಖಲೆ ನಿರ್ಮಿಸಿದ ನಿಮಗೆ ಹಾರ್ದಿಕ ಅಭಿನಂದನೆಗಳು. ನಮ್ಮ ದೇಶವನ್ನು ಮತ್ತೊಮ್ಮೆ ಜಾಗತಿಕ ಭೂಪಟದಲ್ಲಿ ಉನ್ನತ ಮಟ್ಟದಲ್ಲಿ ನಿಲ್ಲಿಸಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗಿದ್ದೀರಿ ಎಂದು ಸುದೀಪ್‌ ಬರೆದುಕೊಂಡಿದ್ದಾರೆ.

ನಟ ಸುದೀಪ್ ಅವರ ಈ ಪ್ರೀತಿ ಹಾಗೂ ಗೌರವಕ್ಕೆ ಅಭಾರಿಯಾಗಿರುವ ಪಿ.ವಿ. ಸಿಂಧು, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಉಡುಗೊರೆ ಹಾಗೂ ಕೈಬರಹದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !