ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ ಏಕಾಏಕಿ ಸುದ್ದಿಗೋಷ್ಠಿ ಕರೆದಿದ್ದು, ಜನರು ಆಶ್ಚರ್ಯದಿಂದ ನೆಕ್ಸ್ಟ್ ಸಿನಿಮಾ ಅಪ್‌ಡೇಟ್ ಬಗ್ಗೆ ಆಸಕ್ತರಾಗಿದ್ದರು. ಆದರೆ ಈ ಪ್ರೆಸ್‌ಮೀಟ್ ಸಿನಿಮಾ ಬಗ್ಗೆ ಅಲ್ಲ ನಟನ ಜನ್ಮದಿನದ ಬಗ್ಗೆಯದ್ದಾಗಿದೆ.
ಹೌದು, ಕಳೆದ ಬಾರಿ ಬರ್ಥಡೇ ವೇಳೆ ಸಾಕಷ್ಟು ಗಲಾಟೆ ಆಗಿತ್ತು. ಆದರೆ ಈ ಬಾರಿ ಶಾಂತವಾಗಿ ಜನ್ಮದಿನ ಆಚರಿಸಿಕೊಳ್ಳೋಣ. ಮನೆಯ ಬಳಿ ದಯವಿಟ್ಟು ಯಾರೂ ಬರಬೇಡಿ. ಇದರಿಂದ ಅಕ್ಕಪಕ್ಕ ಮನೆಯವರಿಗೆ ಕಿರಿಕಿರಿ ಆಗುತ್ತದೆ.
ಕಳೆದ ಬಾರಿ ಬ್ಯಾರಿಕೇಡ್ ಒಡೆದು ಫ್ಯಾನ್ಸ್ ಬಂದಿದ್ದರು. ಅನೇಕರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಬಾರಿ ಶಾಸಕ ಸಿಕೆ ರಾಮಮೂರ್ತಿ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ’ ಎಂದು ಕೇಳಿದ್ದಾರೆ ಸುದೀಪ್. ‘ಕೇಕ್ ತರಬೇಡಿ. ಕಟ್ ಮಾಡಿದಮೇಲೆ ಅದರಷ್ಟು ಅನಾಥ ಮತ್ತೊಬ್ಬರು ಇಲ್ಲ. ಆತರಹ ಸಂಭ್ರಮ ಬೇಡ. ಆ ಹಣದಲ್ಲಿ ಯಾರಿಗಾದರೂ ಊಟ ಹಾಕಿ ಎಂದು ಕೋರಿದ್ದಾರೆ.