Tuesday, March 28, 2023

Latest Posts

ಉದ್ಯಮಿ , ಆತನ ಪುತ್ರನ ಕಿಡ್ನಾಪ್ ಪ್ರಕರಣ: 10 ಆರೋಪಿಗಳ ಬಂಧನ, 21.10 ಲಕ್ಷ ರೂ. ನಗದು ವಶ

ಹೊಸ ದಿಗಂತ ವರದಿ, ಮೈಸೂರು:

ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫೆ.6 ರಂದು ನಡೆದಿದ್ದ ಉದ್ಯಮಿ ಹಾಗೂ ಆತನ ಪುತ್ರನ ಅಪಹರಣ ಪ್ರಕರಣವನ್ನ ಭೇದಿಸಿರುವ ಪೊಲೀಸರು 10 ಆರೋಪಿಗಳನ್ನ ಬಂಧಿಸಿ, 21 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ತಮ್ಮ ಕಚೇರಿಯ ಸಭಾಂಗಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಹರ್ಷ ಇಂಪೆಕ್ಸ್ ಫ್ಯಾಕ್ಟರಿ ಮಾಲೀಕ ದೀಪಕ್ ಮತ್ತು ಅವರ ಪುತ್ರ ಹರ್ಷ ಎಂಬುವರನ್ನು ಅವರ ಕಾರಿನ ಸಮೇತ ಅಪಹರಣ ಮಾಡಲಾಗಿತ್ತು. ಉದ್ಯಮಿ ಮೊಬೈಲ್ ಫೋನ್‌ನಿಂದಲೇ ಆರೋಪಿಗಳು ಅವರ ಕುಟುಂಬಸ್ಥರಿಗೆ ಕಾಲ್ ಮಾಡಿ, ದೀಪಕ್ ಹಾಗೂ ಅವರ ಪುತ್ರ ಹರ್ಷರನ್ನು ಜೀವಂತವಾಗಿ ಬಿಡುಗಡೆ ಮಾಡಬೇಕಾದರೆ ತಮಗೆ 1 ಕೋಟಿ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಕೊಡಲು ಒಪ್ಪಿದ್ದ ಕುಟುಂಬಸ್ಥರಿoದ 35 ಲಕ್ಷ ರೂಗಳನ್ನು ನ್ನು ಆರೋಪಿಗಳು ವಸೂಲಿ ಮಾಡಿದ್ದರು. ಆದರೆ ಉದ್ಯಮಿಯ ಅಪಹರಣದ ವಿಚಾರ ತಿಳಿಯುತ್ತಿದ್ದಂತೆ ಮೈಸೂರು ಜಿಲ್ಲೆಯ ಪೊಲೀಸರು ಎಚ್ಚೆತ್ತು, ನಾಕಾ ಬಂಧಿ ಹಾಕಿ, ವಾಹನಗಳ ತಪಾಸಣೆಯ ಕಾರ್ಯಚರಣೆ ನಡೆಸುತ್ತಿದ್ದರು.
ಸಂಚಾರಿ ದಳದ ಪೊಲೀಸರು ಕೂಡ ಚುರುಕು ಕಾರ್ಯಚರಣೆ ನಡೆಸುತ್ತಿದ್ದಾಗ, ಉದ್ಯಮಿ ದೀಪಕ್ ಹಾಗೂ ಅವರ ಪುತ್ರರ ಕಾರು ಮೈಸೂರಿನ ಚಾಮುಂಡಿಬೆಟ್ಟದ ಬಳಿಯಿರುವ ಸುತ್ತೂರು ಶಾಖಾ ಮಠದ ಬಳಿ ಪತ್ತೆಯಾಗಿತ್ತು. ಅಂದು ರಾತ್ರಿ ದೀಪಕ್ ಹಾಗೂ ಅವರ ಪುತ್ರನನ್ನು ಅಪಹರಣಕಾರರು ಪೊಲೀಸರ ಕಾರ್ಯಚರಣೆಗೆ ಹೆದರಿ ಮೈಸೂರಿನ ಬನ್ನೂರು ರಸ್ತೆಯಲ್ಲಿ ಬಿಟ್ಟು ಕಳುಹಿಸಿದ್ದರು. ರಾತ್ರಿ 10.30ರ ವೇಳೆಗೆ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಪುತ್ರನೊಂದಿಗೆ ಆಗಮಿಸಿದ ದೀಪಕ್, ಪೊಲೀಸರಿಗೆ ದೂರು ನೀಡಿದ್ದರು. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಪಹರಣಕಾರರ ಪತ್ತೆಗಾಗಿ ಮೂರು ತಂಡ ರಚಿಸಲಾಗಿತ್ತು. ಅಪಹರಣಕಾರರು ಬಳಸುತ್ತಿದ್ದ ಮೊಬೈಲ್ ಸಿಮ್‌ಗಳ ಕಾಲ್‌ಗಳನ್ನು ಬೆನ್ನತ್ತಿದ್ದ ಮೈಸೂರು ಪೊಲೀಸರು ಪ್ರಕರಣ ಭೇದಿಸಿದ್ದು, 10 ಆರೋಪಿಗಳನ್ನ ಬಂಧಿಸಿ, 21.10 ಲಕ್ಷರೂಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ಬಂಧಿತರಿoದ ಅಪಹರಣ ಪ್ರಕರಣಕ್ಕೆ ಬಳಸಿದ್ದ ಕಾರು, ಮೂರು ದ್ವಿಚಕ್ರ ವಾಹನ, 5 ಡ್ರಾಗರ್, 3 ಲಾಂಗ್, 11 ಮೊಬೈಲ್ ಫೋಮ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದರು.
ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ಮೂಲದವನಾಗಿದ್ದು, ಈತ ಕೊಲೆ ಪ್ರಕರಣದಲ್ಲಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ನಂತರ ಸ್ನೇಹಿತರ ಟೀಮ್ ಮಾಡಿಕೊಂಡು ಉದ್ಯಮಿ ದೀಪಕ್‌ರನ್ನು ಕಿಡ್ನಾಪ್ ಮಾಡಿ ಈಗ ತನ್ನ ತಂಡದೊAದಿಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಈ ಅಪಹರಣ ಪ್ರಕರಣದ ಒಂದನೇ ಆರೋಪಿ ವಿರುದ್ಧ ಈ ಹಿಂದೆ ಮಂಡ್ಯ ಜಿಲ್ಲೆಯ ಪೂರ್ವ, ಪಶ್ಚಿಮ, ಶಿವಳ್ಳಿ, ಕೆ.ಆರ್.ಪೇಟೆ ಮತ್ತು ಮೈಸೂರು ನಗರದ ಮೇಟಗಳ್ಳಿ, ಮಂಡಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ಆರ್ಮ್ಸ್ ಆಕ್ಟ್, ಎನ್‌ಡಿಪಿಎಸ್ ಅಡಿಯಲ್ಲಿ ಹಾಗೂ ಇನ್ನಿತರ ಪ್ರಕರಣಗಳು ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.

ಎಎಸ್ಪಿ ಡಾ.ನಂದಿನಿ, ಡಿವೈಎಸ್‌ಪಿ ಗೋವಿಂದರಾಜು, ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸ್
ಇನ್ಸ್ಪೆಕ್ಟರ್ ಶಿವನಂಜ ಶೆಟ್ಟಿ ಅವರನ್ನು ಒಳಗೊಂಡ ವಿಶೇಷ ತಂಡಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಿಂದ ಈ ಪತ್ತೆ ಕಾರ್ಯ ನಡೆದಿದ್ದು, ಅದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!