ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 6 ರಂದು ಕಲಬುರಗಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿದ್ದ ವೇಳೆ 11 ವರ್ಷದ ಬಾಲಕನ್ನು ಕಿಡ್ನಾಪ್ ಮಾಡಲಾಗಿದೆ.
ಅಪಹರಣಕ್ಕೊಳಗಾದ ಬಾಲಕನ ತಾಯಿ ಸೈಯದಾ ಸಮೀನಾ ಅಂಜುಮ್ ಅವರು ಶುಕ್ರವಾರ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮೀನಾ ಬೆಂಗಳೂರಿನ ನಿವಾಸಿಯಾಗಿದ್ದು, ಅವರ ಮಗ ಸೈಯದ್ ಮುಕ್ತಾರ್ ಹಶ್ಮಿ ಮತ್ತು ಪುತ್ರಿ ಶಮಿಸ್ತಾ ಅಲುಮೀರಾ ಅವರೊಂದಿಗೆ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಂಜುಮ್ ನವೆಂಬರ್ 4 ರಂದು ತನ್ನ ಮಗ ಮತ್ತು ಮಗಳೊಂದಿಗೆ ಕಲಬುರಗಿಯಲ್ಲಿರುವ ತನ್ನ ಅತ್ತೆ-ಮಾನವನ ಮನೆಗೆ ಭೇಟಿ ನೀಡಿದ್ದರು. ನವೆಂಬರ್ 6 ರಂದು ಸಂಜೆ ಅವರ ಮಗ ಹತ್ತಿರದ ಮಸೀದಿಗೆ ಹೋಗಿದ್ದ ಮತ್ತು ಹಿಂತಿರುಗಲಿಲ್ಲ. ಗುರುವಾರ ಸಂಜೆ, ರಾತ್ರಿ 9 ಗಂಟೆ ಸುಮಾರಿಗೆ ಮುಖ್ಯ ಬಾಗಿಲಿನ ಬಳಿ ಪತ್ರ ಬರೆದು ಅದರಲ್ಲಿ ಅಪಹರಣಕಾರರು 22 ಲಕ್ಷ ರೂ. ಹಣ ನೀಡವಂತೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಹಣ ನೀಡಬೇಕು, ಇಲ್ಲದಿದ್ದರೇ ಮಗನಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.