ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಯ ಅಪಹರಣ: ಪೋಲೀಸರ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಎಂಟು ವರ್ಷದ ಭಾರತೀಯ ಮೂಲದ ಬಾಲಕಿಯನ್ನು ಅಪಹರಿಸಲಾಗಿದ್ದು ಪ್ರಕರಣದ ತನಿಖೆಯಲ್ಲಿ ಪೊಲೀಸರ ನಿಷ್ಕ್ರಿಯತೆ ನಗರದ ನಿವಾಸಿಗಳಿಂದ ಪ್ರತಿಭಟನೆಯನ್ನು ಪ್ರಚೋದಿಸಿದೆ.

ರೈಲ್ಯಾಂಡ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಬಿರಾಹ್ ದೇಖ್ತಾ, ನವೆಂಬರ್ 4 ರಂದು ಬೆಳಿಗ್ಗೆ ಇನ್ನೊಬ್ಬ ವಿದ್ಯಾರ್ಥಿನಿಗಾಗಿ ಕಾಯುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಆಕೆಯ ಶಾಲಾ ವಾಹನದಿಂದ ಅಪಹರಿಸಿದ್ದರು.

ಆಕೆಯ ಪೋಷಕರು ಕೆಲವು ವರ್ಷಗಳ ಹಿಂದೆ ಭಾರತದಿಂದ ವಲಸೆ ಬಂದು ಕೇಪ್ ಟೌನ್‌ನಲ್ಲಿ ನೆಲೆಸಿದ್ದರು. ಆಕೆಯ ತಂದೆ ನಗರದಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿದ್ದಾರೆ.

ಘಟನೆ ನಡೆದು 10 ದಿನಗಳಾದರೂ ಪೋಲೀಸರು ಈ ಕುರಿತು ಯಾವುದೇ ರೀತಿಯಲ್ಲಿಯೂ ಸ್ಪಂದಿಸದ ಕುರಿತು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ಬಾಲಕಿಯ ಪೋಷಕರೊಂದಿಗೆ ಸೇರಿದ ನೂರಾರು ಆತಂಕಿತ ಗೇಟ್ಸ್‌ವಿಲ್ಲೆ ನಿವಾಸಿಗಳು ಅಥ್ಲೋನ್‌ನಲ್ಲಿರುವ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿದ್ದು ಅಬಿರಾ ಅವರನ್ನು ತುರ್ತು ಮತ್ತು ಸುರಕ್ಷಿತವಾಗಿ ಹಿಂದಿರುಗಿಸಲು ಮತ್ತು ಅಪಹರಣಕಾರರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!