ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಖ್ಯಾತ ನಟ ಮಹೇಶ್​ ಬಾಬು ಅವರ ತಂದೆ, ಸೂಪರ್​ ಸ್ಟಾರ್​​ ಕೃಷ್ಣ ಘಟ್ಟಮನೇನಿ ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗಿನ ಜಾವ ನಿಧನರಾದರು.
ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಆಪ್ತರು. ಚಿತ್ರರಂಗದ ಗಣ್ಯರು ಅಶ್ರುತರ್ಪಣ ಮಿಡಿದಿದ್ದಾರೆ.
ಕಳೆದ ತಿಂಗಳು, ಕೃಷ್ಣ ಅವರ ಮೊದಲ ಪತ್ನಿ ಮತ್ತು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ನಿಧನರಾದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರ ನಿಧನದ ನಂತರ ಘಟ್ಟಮನೇನಿ ಕುಟುಂಬಕ್ಕೆ ಮತ್ತೊಂದು ಅಘಾತ ಎದುರಾಗಿದೆ.
79 ವರ್ಷದ ಕೃಷ್ಣ ಅವರು ತಮ್ಮ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತೆಲುಗು ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಕೃಷ್ಣ ಕೊನೆಯ ಬಾರಿಗೆ 2016 ರ ತೆಲುಗು ಚಲನಚಿತ್ರ ಶ್ರೀ ಶ್ರೀ ನಲ್ಲಿ ಕಾಣಿಸಿಕೊಂಡಿದ್ದರು.
ಕೃಷ್ಣ ತೇನಿಮನಸಲು, ಸಾಕ್ಷಿ, ಅಲ್ಲೂರಿ ಸೀತಾರಾಮರಾಜು, ಸಿಂಹಾಸನಂ, ಪಾಡಿಪಂಟಲು, ಪಚ್ಚನಿಸಂಸಾರಂ, ಪಂಡಂಟಿಕಾಪುರಂ, ದೇವಡು ಚೇಸಿನ ಮನಷುಲು, ಅಗ್ನಿಪರ್ವತಂ, ಕಂಚುಕಾಗಡ, ನಂಬರ್​ ಒನ್​, ಬ್ರಹ್ಮಾಸ್ತ್ರಂ, ಮೋಸಗಾಳ್ಳಕು ಮೋಸಗಾಡು, ಮುಂದಡುಗು, ಕಂಚುಕಾಗಡ, ವಾರಸುಡು, ಒಸೆಯ್ ರಾಮುಲಮ್ಮ, ಪ್ರಜಾರಾಜ್ಯಂ, ಗೂಢಚಾರಿ 116, ಏಜೆಂಟ್ ಗೋಪಿ, ಅಶ್ವತ್ಥಾಮ, ಇದ್ದರು ದೊಂಗಲು, ಮುಗ್ಗುರು ಕೊಡುಕಲು ಸೇರಿದಂತೆ ಅನೇಕ ಚಿತ್ರಗಳ ಪಾತ್ರಗಳಿಗೆ ಜೀವತುಂಬಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!