ಭೀಕರವಾಗಿ ಶ್ರದ್ಧಾಳನ್ನು ಕೊಂದಿದ್ದೇನೆ: ಪಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಅಫ್ತಾಬ್

ಹೊಸದಿಗಂತ ಟಿಜಿಟಲ್ ಡೆಸ್ಕ್:

ತನ್ನ ಸಂಗಾತಿ ಶ್ರದ್ಧಾ ವಾಲ್ಕರ್‌ರನ್ನು ಭೀಕರವಾಗಿ ಕೊಂದು ಆಕೆಯ ಮೃತದೇಹವನ್ನು ಕತ್ತರಿಸಿ ಅರಣ್ಯ ಪ್ರದೇಶಗಳಲ್ಲಿ ಎಸೆದಿದ್ದೇನೆ ಎಂದು ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿದ್ದಾನೆ.

ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಗಳ ಪ್ರಕಾರ ಅಫ್ತಾಬ್ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ಸಾಕಷ್ಟು ಹುಡುಗಿಯರ ಜೊತೆ ಸಂಬಂಧ ಹೊಂದಿದ್ದ ವಿಷಯವನ್ನೂ ಒಪ್ಪಿಕೊಂಡಿದ್ದಾನೆ.

ಪಾಲಿಗ್ರಾಫ್ ಪರೀಕ್ಷೆ ನಂತರ ಅಫ್ತಾಬ್ ತೆರಳುತ್ತಿದ್ದ ವಾಹನದ ಮೇಲೆ ದಾಳಿಯಾಗಿತ್ತು. ಪಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪು ಒಪ್ಪಿಕೊಳ್ಳುವುದು ನ್ಯಾಯಾಲಯದಲ್ಲಿ ಸ್ವೀಕಾರ್ಹವಲ್ಲ. ಆದರೆ ಅಫ್ತಾಬ್ ಸತ್ಯ ಹೇಳುತ್ತಿದ್ದಾನಾ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪರೀಕ್ಷೆ ನಡೆಯಬೇಕು ಎಂದಿದ್ದರು.

ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ತಪ್ಪೊಪ್ಪಿಗೆ ಹಲವು ಸೂಕ್ಷ್ಮ ಸಾಕ್ಷ್ಯಗಳ ಪತ್ತೆಗೆ ಸಹಾಯವಾಗಬಹುದು ಎಂದು ಪೊಲೀಸರು ಹೇಳಿದ್ದಾರೆ. ಅಫ್ತಾಬ್‌ನನ್ನು ನಾರ್ಕೋ- ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸುವುದು ಬಾಕಿ ಇದೆ ಎಂದು ಹೇಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!