ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ಹತ್ಯೆ: ಭಾರತದ ಕೈವಾಡ ಇರಬಹುದಾ ಎಂದ ಕೆನಡಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಗೆ ಭಾರತ ಕಾರಣವಿರಬಹುದು ಎನ್ನುವ ಆಘಾತಕಾರಿ ಹೇಳಿಕೆಯನ್ನು ಕೆನಡಾ ನೀಡಿದೆ.

ಭಾರತ ಹಾಗೂ ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕು ಮೂಡವಂಥ ಬೆಳವಣಿಗೆ ಇದಾಗಿದ್ದು, ಹರ್ದೀಪ್ ಸಿಂಗ್ ಹತ್ಯೆ ಹಿಂದೆ ಭಾರತ ಸರ್ಕಾರದ ಕೈವಾಡವಿರುವ ಶಂಕೆ ಇದೆ, ಹಾಗಾಗಿ ದೇಶದ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದಾರೆ.
ಜೂನ್ 18ರಂದು ಕೆನಡಾದ ಗುರುದ್ವಾರದ ಪಾರ್ಕಿಂಗ್ ಬಳಿ ಖಲಿಸ್ತಾನಿ ಟೈಗರ್ ಫೋರ್ಸ್ ಮುಖ್ಯಸ್ಥ ಹರ್‌ದೀಪ್‌ಸಿಂಗ್ ಹತ್ಯೆಯಾಗಿತ್ತು.

ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದು, ಜಿ20 ಶೃಂಗಸಭೆ ವೇಳೆ ಈ ವಿಚಾರಗಮನಕ್ಕೆ ತಂದಿದ್ದೇನೆ. ಸದ್ಯ ತನಿಖೆ ನಡೆಯುತ್ತಿದೆ. ನಮ್ಮ ತನಿಖೆಗೆ ಭಾರತ ಸರ್ಕಾರ ಸಹಕರಿಸಬೇಕು. ಒಂದು ವೇಳೆ ಹರ್ದೀಪ್ ಸಿಂಗ್ ಹತ್ಯೆಯಲ್ಲಿ ಭಾರತದ ಕೈವಾಡವಿದ್ದರೆ ಸಾರ್ವಭೌಮತ್ವ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!