ಬಕ್ಕಿಂಗ್‌ಹ್ಯಾಮ್ ಅರಮನೆ ಮುಂದೆ ಜನರಸಾಗರ: ಕಿಂಗ್ ಚಾರ್ಲ್ಸ್ IIIಗೆ ಅದ್ಧೂರಿ ಸ್ವಾಗತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟನ್‌ನ ನೂತನ ರಾಜ ಚಾರ್ಲ್ಸ್ III ಲಂಡನ್‌ನ ಬಕ್ಕಿಂಗ್‌ಹ್ಯಾಮ್ ಅರಮನೆಗೆ ಮರಳಿದ್ದು, ಜನರಿಂದ ಅದ್ಧೂರಿ ಸ್ವಾಗತ ದೊರಕಿದೆ.

ಬೆಂಬಲಿಗರ ಸಮುದ್ರವೇ ಅರಮನೆ ಮುಂದೆ ನೆರೆದಿದ್ದು, ‘ಗಾಡ್ ಸೇವ್ ದಿ ಕಿಂಗ್ ‘ಎನ್ನುವ ಘೋಷಣೆ ಎಲ್ಲೆಡೆ ಮೊಳಗಿದೆ. ಕಿಂಗ್ ಚಾರ್ಲ್ಸ್ III ಹಾಗೂ ಅವರ ಪತ್ನಿ ಕೆಮಿಲ್ಲಾ ಅವರು ಅರಮನೆ ಹೊರಗೆ ನೆರೆದಿದ್ದ ಜನರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಅರಮನೆ ಮುಂದೆ ತಮ್ಮ ಲಿಮೋ ನಿಲ್ಲಿಸಿ, ಜನರೊಂದಿಗೆ ಕೈ ಕುಲುಕಿ ಮುಗುಳ್ನಗೆಯಿಂದ ಮಾತನಾಡಿದ್ದಾರೆ. ಸುಮಾರು ಹತ್ತು ನಿಮಿಷಗಳು ಜನರೊಂದಿಗೆ ಸ್ಪಂದಿಸಿ, ಸಂತಾಪ ಸ್ವೀಕರಿಸಿದ್ದಾರೆ. ಗುರುವಾರ ರಾಣಿ ಎಲಿಜಿಬೆತ್ II ಕೊನೆಯುಸಿರೆಳೆದ ನಂತರ ಚಾರ್ಲ್ಸ್ III ಸಿಂಹಾಸನ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!