ಸುಧಾರಿತ ವೈಶಿಷ್ಟ್ಯಗಳೊಂದಿಗೆ ಹೊಸ ಅವತಾರದಲ್ಲಿ ಬರುತ್ತಿದೆ ವಂದೇ ಭಾರತ್‌ ಎಕ್ಸ್‌ ಪ್ರೆಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಪಾನ್‌ ಸಹಕಾರದೊಂದಿಗೆ ಭಾರತದಲ್ಲಿ ಪ್ರಾರಂಭಗೊಂಡಿರುವ ಅತ್ಯಾಧುನಿಕ ವಂದೇಭಾರತ್‌ ಹೈಸ್ಪೀಡ್‌ ಬುಲೆಟ್‌ ರೈಲಿಗೆ ಸುಧಾರಿತ ರೂಪ ಕೊಡಲಾಗಿದ್ದು ಶೀಘ್ರದಲ್ಲೇ ಇದು ಕಾರ್ಯಾರಂಭ ಮಾಡಲಿದೆ ಎಂದು ಭಾರತೀಯ ರೈಲ್ವೇ ಘೋಷಿಸಿದೆ. ಇದು ಪ್ರಯಾಣಿಕರಿಗೆ ಅತ್ಯುತ್ತಮ ಮತ್ತು ಉನ್ನತೀಕರಿಸಿದ ಸೌಲಭ್ಯಗಳನ್ನು ನೀಡಲಿದೆ.

ವಂದೇ ಭಾರತ್ 2 ರೈಲು 180Kmph ಗರಿಷ್ಠ ವೇಗ ಹೊಂದಿದ್ದು ಕೇವಲ 52 ಸೆಕೆಂಡುಗಳಲ್ಲಿ 0 ರಿಂದ 100 Kmpl ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 392 ಟನ್ ತೂಕ ಸಾಮರ್ಥ್ಯದೊಂದಿಗೆ WI-FI ಸೇರಿದಂತೆ ಹೆಚ್ಚು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ಹೊಸ ವಂದೇ ಭಾರತ್‌ ರೈಲಿನಲ್ಲಿ ಎಕ್ಸಿಕ್ಯೂಟಿವ್ ವರ್ಗದ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೈಡ್ ರಿಕ್ಲೈನರ್ ಸೀಟ್ ಸೌಲಭ್ಯವನ್ನು ಈಗ ಎಲ್ಲಾ ವರ್ಗಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸದಲ್ಲಿ, ಗಾಳಿ ಶುದ್ಧೀಕರಣಕ್ಕಾಗಿ ರೂಫ್ ಮೌಂಟೆಡ್ ಪ್ಯಾಕೇಜ್ ಯುನಿಟ್ (RMPU) ನಲ್ಲಿ ಫೋಟೋ-ಕ್ಯಾಟಲಿಟಿಕ್ ಅಲ್ಟ್ರಾ ವೈಲೆಟ್ ಏರ್ ಪ್ಯೂರಿಫಿಕೇಶನ್ ಸಿಸ್ಟಮ್ ಅನ್ನು ಸ್ಥಾಪಿಸಲಾಗಿದೆ. ತಾಜಾ ಗಾಳಿ ಮತ್ತು ಹಿಂತಿರುಗುವ ಗಾಳಿಯ ಮೂಲಕ ಬರುವ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿಗಳಿಂದ ಗಾಳಿಯನ್ನು ಫಿಲ್ಟರ್ ಮಾಡಲು ಮತ್ತು ಸ್ವಚ್ಛಗೊಳಿಸಲು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ 32 ಇಂಚಿನ ಎಲ್‌ಸಿಡಿ ಟಿವಿಗಳನ್ನೂ ಇದು ಒಳಗೊಂಡಿದೆ.

ಆಗಸ್ಟ್ 2023 ರೊಳಗೆ ಅಂತಹ 75 ರೈಲುಗಳನ್ನು ತಯಾರಿಸುವ ಗುರಿಯನ್ನು ರೈಲ್ವೆ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!