ಮಹಾರಾಷ್ಟ್ರ ಪ್ರಯಾಣಿಕರಿಂದ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಕಿರಿಕ್

ಹೊಸದಿಗಂತ ವರದಿ,ಕಲಬುರಗಿ:

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಡಿ ಭಾಗವಾದ ಬಳ್ಳೂರಗಿ ಚೆಕ್ ಪೋಸ್ಟ್, ನಲ್ಲಿ ನೆರೆಯ ರಾಜ್ಯದ ಪ್ರಯಾಣಿಕರು ಕಿರಿಕ್ ಮಾಡುತ್ತಿದ್ದಾರೆ.
ಆರ್,ಟಿ.ಪಿ.ಸಿ.ಆರ್. ಟೆಸ್ಟ್ ಇಲ್ಲದಿದ್ದರೂ, ಜಿಲ್ಲೆಗೆ ಪ್ರವೇಶ ನೀಡುವಂತೆ ಒತ್ತಾಯಿಸಿ, ಚೆಕ್ ಪೋಸ್ಟ್ ಸಿಬ್ಬಂದಿ ಜೊತೆಗೆ ಜಗಳವನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೊನ್ನೆಯಷ್ಟೇ ಅದೇ ಚೆಕ್ ಪೋಸ್ಟ್, ನಲ್ಲಿ ಕಿರಿಕಿರಿ ಮಾಡಿ ಪ್ರಯಾಣಿಕರು ಜಿಲ್ಲೆಗೆ ಪ್ರವೇಶ ಮಾಡಿದ್ದಾರೆ. ಇಂದು ಭಾನುವಾರ ಮತ್ತೆ ಅದೇ ಖ್ಯಾತೆಯನ್ನು ಪೋಲಿಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ತೆಗೆಯುತ್ತಿದ್ದಾರೆ.
ಡಬಲ್ ಡೋಸ್ ಲಸಿಕೆ ಪಡೆದಿದ್ದೇವೆ. ನಮಗೆ ಪ್ರವೇಶ ನೀಡಿ ಎಂದು ಪಟ್ಟು ಹಿಡಿದು, ಕೊನೆಗೆ ಸಿಬ್ಬಂದಿ ಜೊತೆಗೆ ಜಗಳವಾಡಿ, ಬ್ಯಾರಿಕೇಡ್ ಕಿತ್ತು ಹಾಕಿ,ಜಿಲ್ಲೆ ಗೆ ಪ್ರವೇಶ ಮಾಡಿದ್ದಾರೆ.
20ಕ್ಕೂ ಅಧಿಕ ವಾಹನಗಳ ಪ್ರಯಾಣಿಕರು ಸಿಬ್ಬಂದಿ ಜೊತೆಗೆ ಜಗಳವಾಡಿದ್ದು, ಸಿಬ್ಬಂದಿ ಎಷ್ಟೆ ಹೇಳಿದರೂ ಮಹಾರಾಷ್ಟ್ರ ಪ್ರಯಾಣಿಕರು ಕೇಳುತ್ತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!