ಎಡವಿದ ಟೀಮ್ ಇಂಡಿಯಾಕ್ಕೆ ಕಿಶನ್- ಪಾಂಡ್ಯ ಆಸರೆ: ಪಾಕ್ ಗೆ 267 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ಭಾರತ 266 ರನ್ ಸಿಡಿಸಿ ಆಲೌಟ್ ಆಯಿತು. ಪಾಕಿಸ್ತಾನಕ್ಕೆ 267 ರನ್ ಟಾರ್ಗೆಟ್ ನೀಡಲಾಗಿದೆ.

ಟಾಸ್ ಗೆದ್ದ ರೋಹಿತ್ ಪಡೆ ನಿರೀಕ್ಷೆಯಂತೆ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.ಪಾಕಿಸ್ತಾನದ ಮಾರಕ ದಾಳಿಗೆ ಟೀಂ ಇಂಡಿಯಾ ವಿಕೆಟ್ ಕಳೆದುಕೊಳ್ಳೂತ್ತಿತ್ತು.

ನಾಯಕ ರೋಹಿತ್ ಶರ್ಮಾ 11 ರನ್ ಸಿಡಿಸಿ ನಿರ್ಗಮಿಸಿದರು ವಿರಾಟ್ ಕೊಹ್ಲಿ ಕೇವಲ 4 ರನ್ ಸಿಡಿಸಿ ಔಟಾಗಿದ್ದರು. ಇನ್ನು ಶ್ರೇಯಸ್ ಅಯ್ಯರ್ 14 ರನ್ ದಾಟಲಿಲ್ಲ. ಶುಭಮನ್ ಗಿಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರೂ 10 ರನ್ ದಾಟಲಿಲ್ಲ.

ಇದರಿಂದ 66 ರನ್‌ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ಆಲೌಟ್ ಭೀತಿ ಎದುರಿಸಿತ್ತು. ಆದರೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದಿಂದ ನಿಧಾನವಾಗಿ ತಿರುಗೇಟು ನೀಡಲು ಆರಂಭಿಸಿತು.

5ನೇ ವಿಕೆಟ್‌‍ಗೆ ಈ ಜೋಡಿ 135 ರನ್ ಜೊತೆಯಾಟ ನೀಡಿತು. ಇಶಾನ್ ಕಿಶನ್ 81 ಎಸೆತದಲ್ಲಿ 82 ರನ್ ಸಿಡಿಸಿ ಔಟಾದರು. ಇತ್ತ ಹಾರ್ದಿಕ್ ಪಾಂಡ್ಯ 90 ಎಸೆತದಲ್ಲಿ 87 ರನ್ ಸಿಡಿಸಿ ಔಟಾದರು.

ಜಡೇಜಾ 14 ರನ್ ಸಿಡಿಸಿ ಔಟಾದರು. ಶಾರ್ದೂಲ್ ಠಾಕೂರ್ 3 ರನ್‌ಗೆ ಸುಸ್ತಾದರು. ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಹೋರಾಟದಿಂದ ಭಾರತ 250ರ ಗಡಿ ದಾಟಿತು. ಕುಲ್ದೀಪ್ 4 ರನ್ ಸಿಡಿಸಿ ಔಟಾದರು. ಬುಮ್ರಾ 16 ರನ್ ಸಿಡಿಸಿ ಔಟಾಗುವ ಮೂಲಕ ಭಾರತ 48.5 ಓವರ್‌ನಲ್ಲಿ 266 ರನ್‌ಗೆ ಆಲೌಟ್ ಆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!