ಆಫ್ರಿಕಾದಿಂದ ಭಾರತಕ್ಕೆತಂದ ಚೀತಾಗಳ ಸಾವು: ಹೊಸ ಪರಿಸರದಲ್ಲಿ ಸವಾಲುಗಳು ಸಹಜ ಎಂದ ನಮೀಬಿಯಾ ರಾಯಭಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಹಲವು ಚೀತಾಗಳನ್ನು ಸಾವನ್ನಪ್ಪಿದ್ದು ಇದಕ್ಕೆ ಕಾರಣ ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಕಳುಹಿಸುವಾಗ ಸಾವುಗಳು ಸಹಜವಾಗಿ ಸಂಭವಿಸುತ್ತವೆ ಎಂದು ಭಾರತದ ನಮೀಬಾಯ ರಾಯಭಾರಿ ಗೇಬ್ರಿಯಲ್ ಸಿನಿಂಬೊ ಅವರು ಹೇಳಿದ್ದಾರೆ.

ಈ ವರ್ಷದ ಮಾರ್ಚ್ನಿಂದ ಎರಡು ದೇಶಗಳಿಂದ ತಂದ 20 ಚಿರತೆಗಳ ಪೈಕಿ ಒಂಬತ್ತು ಚಿರತೆಗಳು ಸಾವನ್ನಪ್ಪಿವೆ. ನೀವು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಪರಿಚಯಿಸುವಾಗ, ಸಾವುನೋವುಗಳಂತಹ ಕೆಲವು ಸವಾಲುಗಳು ಇದ್ದೇ ಇರುತ್ತದೆ. ಇದು ಈ ರೀತಿಯ ಯಾವುದೇ ಯೋಜನೆಯ ಒಂದು ಭಾಗವಾಗಿರುತ್ತದೆ ಎಂದು ಸಿನಿಂಬೊ ಹೇಳಿದರು.

ಮುಂದಿನ ದಿನಗಳಲ್ಲಿ ಚೀತಾಗಳು ಭಾರತದ ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದಿದ್ದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!