August 13, 2026
Thursday, August 13, 2026
spot_img

ಕಿಶನ್-ತಿಲಕ್ ಅರ್ಧಶತಕದ ಧಮಾಕ: ಜಿಂಬಾಬ್ವೆಯನ್ನು ಮಣಿಸಿ ಇತಿಹಾಸ ಬರೆದ ಶ್ರೇಯಸ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಎರಡನೇ T20 ಸಮರದಲ್ಲಿ ಭಾರತೀಯ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ 90 ರನ್‌ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ T20 ಸರಣಿಯಲ್ಲಿ 2-0 ಮುನ್ನಡೆ ಪಡೆಯುವ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರಿಗೆ ಇದು ಚೊಚ್ಚಲ ಸರಣಿ ಗೆಲುವಾಗಿದೆ.

ಕಿಶನ್ ಹಾಗೂ ತಿಲಕ್ ಅರ್ಧಶತಕದ ಅಬ್ಬರ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ನಿಗದಿತ 20 ಓವರ್‌ಗಳಲ್ಲಿ ಬೃಹತ್ 219 ರನ್‌ ಕಲೆಹಾಕಿತು. ಆರಂಭಿಕ ಆಟಗಾರ ಇಶಾನ್ ಕಿಶನ್ ಹಾಗೂ ಯುವ ಬ್ಯಾಟರ್ ತಿಲಕ್ ವರ್ಮಾ ಅವರ ಸ್ಪೋಟಕ ಅರ್ಧಶತಕಗಳು ತಂಡದ ದೊಡ್ಡ ಮೊತ್ತಕ್ಕೆ ಕಾರಣವಾದವು. ಇದರಿಂದ ಜಿಂಬಾಬ್ವೆಗೆ 220 ರನ್‌ಗಳ ಕಠಿಣ ಗುರಿ ಸಿಕ್ಕಿತು.

129 ರನ್‌ಗಳಿಗೆ ಜಿಂಬಾಬ್ವೆ ಆಲೌಟ್

ಬೃಹತ್ ಗುರಿ ಬೆನ್ನಟ್ಟಿದ ಆತಿಥೇಯ ಜಿಂಬಾಬ್ವೆ, ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿತು. 20 ಓವರ್‌ಗಳನ್ನು ಪೂರ್ತಿಯಾಗಿ ಆಡಲಾಗದೆ 18ನೇ ಓವರ್‌ನಲ್ಲೇ ಕೇವಲ 129 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡ ಏಕಪಕ್ಷೀಯ ಗೆಲುವು ಸಾಧಿಸಿ ಸರಣಿ ಮುಡಿಗೇರಿಸಿಕೊಂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !