July 29, 2026
Wednesday, July 29, 2026
spot_img

Kitchen Tips | ಕೂಲ್ ಆಗಿ ತಿನ್ಬೇಕು ಅಂತ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡ್ಬೇಡಿ! ಆರೋಗ್ಯ ಕೆಡುತ್ತೆ

ಬೇಸಿಗೆಯ ಸಮಯದಲ್ಲಿ ಹಣ್ಣುಗಳು ಬೇಗ ಹಾಳಾಗಬಾರ್ದು ಅಂತ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸ ಇರುತ್ತೆ. ಆದರೆ ಎಲ್ಲ ಹಣ್ಣುಗಳನ್ನೂ ಫ್ರಿಡ್ಜ್‌ನಲ್ಲಿ ಇಡುವುದು ಆರೋಗ್ಯಕರವಲ್ಲ. ಕೆಲವು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಾಗ ತಮ್ಮ ಸ್ವಾಭಾವಿಕ ರುಚಿ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ.

ಉದಾಹರಣೆಗೆ ಬಾಳೆಹಣ್ಣು ಫ್ರಿಡ್ಜ್‌ನಲ್ಲಿ ಇಟ್ಟರೆ ಅದರ ತೊಲೆ ಬೇಗ ಕಪ್ಪಾಗುತ್ತದೆ ಮತ್ತು ಒಳಗಿನ ರುಚಿಯೂ ಬದಲಾಗುತ್ತದೆ. ಮಾವು ಕೂಡ ತಂಪಾದ ತಾಪಮಾನದಲ್ಲಿ ಇಟ್ಟರೆ ಅದರ ಸಿಹಿ ಹಾಗೂ ಸುಗಂಧ ಕಡಿಮೆಯಾಗಬಹುದು. ಅದೇ ರೀತಿ ಪಪ್ಪಾಯಿ ಮತ್ತು ಅನಾನಸ್ ಹಣ್ಣುಗಳನ್ನು ಸಹ ಫ್ರಿಡ್ಜ್‌ನಲ್ಲಿ ಹೆಚ್ಚು ಸಮಯ ಇಡುವುದು ಸೂಕ್ತವಲ್ಲ.

ಇದನ್ನೂ ಓದಿ:

ಗಮನಿಸಬೇಕಾದ ವಿಷಯಗಳು

  • ಬಾಳೆಹಣ್ಣು, ಮಾವು ಮೊದಲಾದ ಹಣ್ಣುಗಳನ್ನು ಕೊಠಡಿ ತಾಪಮಾನದಲ್ಲೇ ಇಡಿ
  • ಫ್ರಿಡ್ಜ್‌ನಲ್ಲಿ ಇಟ್ಟರೆ ಹಣ್ಣಿನ ಸ್ವಾಭಾವಿಕ ರುಚಿ ಕಡಿಮೆಯಾಗಬಹುದು
  • ಕೆಲ ಹಣ್ಣುಗಳ ಪೋಷಕಾಂಶಗಳ ಮೇಲೂ ಪರಿಣಾಮ ಬೀರುತ್ತದೆ

ಹೀಗಾಗಿ ಹಣ್ಣುಗಳನ್ನು ಸಂಗ್ರಹಿಸುವಾಗ ಅವುಗಳ ಸ್ವಭಾವವನ್ನು ಗಮನಿಸಿ ಇಡುವುದು ಉತ್ತಮ. ಸರಿಯಾದ ರೀತಿಯಲ್ಲಿ ಇಟ್ಟರೆ ಹಣ್ಣುಗಳ ರುಚಿಯೂ ಉಳಿಯುತ್ತದೆ, ಆರೋಗ್ಯಕ್ಕೂ ಲಾಭವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !