March 31, 2026
Tuesday, March 31, 2026
spot_img

Kitchen Tips | ಕರಿಬೇವು ಸೊಪ್ಪು ಒಣಗಿ ಒಗ್ಗರಣೆಗೆ ಪರಿಮಳನೇ ಬರ್ತಿಲ್ವಾ? ಈ ಸ್ಮಾರ್ಟ್ ಟಿಪ್ಸ್ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಡಿಗೆಮನೆಯಲ್ಲಿ ಒಗ್ಗರಣೆ ಹಾಕೋದು ಎಂದಾಗ ಮೊದಲು ನೆನಪಾಗೋದು ಕರಿಬೇವು ಸೊಪ್ಪು. ಆದರೆ ಕೆಲವೊಮ್ಮೆ ಫ್ರಿಜ್‌ನಲ್ಲಿ ಇಟ್ಟಿದ್ದ ಕರಿಬೇವು ಒಣಗಿ ಹೋಗಿ, ಒಗ್ಗರಣೆಗೆ ಹಾಕಿದರೂ ಆ ಒಗ್ಗರಣೆಯ ಪರಿಮಳವೇ ಬರುವುದಿಲ್ಲ. ಇಂತಹ ಸಮಸ್ಯೆ ನಿಮಗೂ ಆಗ್ತಿದೆಯಾ? ಹಾಗಿದ್ರೆ ಈ ಸರಳ ಆದರೆ ಉಪಯುಕ್ತ ಟಿಪ್ಸ್ ನಿಮಗಾಗಿ.

ಮೊದಲಿಗೆ, ಕರಿಬೇವನ್ನು ತೊಳೆದು ತಕ್ಷಣ ಫ್ರಿಜ್‌ಗೆ ಇಡಬೇಡಿ. ಅದರಲ್ಲಿ ಇರುವ ತೇವಾಂಶದಿಂದ ಸೊಪ್ಪು ಬೇಗ ಕಪ್ಪಾಗಬಹುದು ಅಥವಾ ಒಣಗಬಹುದು. ಚೆನ್ನಾಗಿ ಒಣಗಿಸಿ ನಂತರ ಟಿಶ್ಯೂ ಪೇಪರ್ ಅಥವಾ ಸ್ವಚ್ಛ ಬಟ್ಟೆಯಲ್ಲಿ ಸುತ್ತಿ ಏರ್‌ಟೈಟ್ ಡಬ್ಬಿಯಲ್ಲಿ ಇಟ್ಟರೆ ಹೆಚ್ಚು ದಿನ ತಾಜಾ ಇರುತ್ತದೆ.

ಇದನ್ನೂ ಓದಿ:

ಒಗ್ಗರಣೆಗೆ ಹಾಕುವ ಮೊದಲು ಸೊಪ್ಪನ್ನು 5 ನಿಮಿಷ ತಣ್ಣೀರಿನಲ್ಲಿ ನೆನೆಸಿಟ್ಟರೆ ಅದರ ತಾಜಾತನ ಸ್ವಲ್ಪ ಮಟ್ಟಿಗೆ ಮರಳಿ ಬರುತ್ತದೆ. ಇದರಿಂದ ಎಣ್ಣೆಯಲ್ಲಿ ಹಾಕಿದಾಗ ಮತ್ತೆ ಸುವಾಸನೆ ಬರುತ್ತದೆ.

ಇನ್ನೊಂದು ಸುಲಭ ಟಿಪ್ ಎಂದರೆ, ಕರಿಬೇವನ್ನು ಸ್ವಲ್ಪ ಎಣ್ಣೆಯಲ್ಲಿ ಲೈಟ್ ಆಗಿ ಹುರಿದು ಫ್ರಿಜ್‌ನಲ್ಲಿ ಸ್ಟೋರ್ ಮಾಡಬಹುದು. ಬೇಕಾದಾಗ ನೇರವಾಗಿ ಒಗ್ಗರಣೆಗೆ ಬಳಸಿದರೆ ರುಚಿ ಮತ್ತು ಪರಿಮಳ ಎರಡೂ ಚೆನ್ನಾಗಿರುತ್ತವೆ.

ಒಣಗಿದ ಕರಿಬೇವನ್ನು ಹಾಗೇ ಹಾಕುವ ಬದಲು ಅದನ್ನು ಪುಡಿ ಮಾಡಿ ಚಟ್ನಿ ಪುಡಿ ಅಥವಾ ಅನ್ನಕ್ಕೆ ಮಿಕ್ಸ್ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ರುಚಿಯೂ ಹೆಚ್ಚುತ್ತದೆ, ವ್ಯರ್ಥವೂ ಆಗುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !