ಟೀಮ್ ಇಂಡಿಯಾ ಬೌಲಿಂಗ್ ಪರಾಕ್ರಮಕ್ಕೆ ಸುಸ್ತಾದ ಕಿವೀಸ್: 108 ರನ್‌ಗೆ ಆಲೌಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

2ನೇ ಏಕದಿನ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ತತ್ತರಿಸಿದ್ದು 108 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾಗೆ 109 ರನ್ ಟಾರ್ಗೆಟ್ ನೀಡಲಾಗಿದೆ.

ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿ ಆರಂಭದಿಂದಲೇ ಭಾರತ ಹಿಡಿತ ಸಾಧಿಸಿತು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ಲಯಬದ್ಧ ಬೌಲಿಂಗ್ ಗೆ ನ್ಯೂಜಿಲೆಂಡ್ ಬ್ಯಾಟ್ಸಮನ್ ಗಳು ಪೆವಿಲಿಯನ್ ನತ್ತ ಪರೇಡ್ ನಡೆಸಿದರು.

ಹೆನ್ರಿ ನಿಕೋಲಸ್ ಕೇವಲ 2 ರನ್ ಸಿಡಿಸಿ ಔಟಾದರು. ಡರಿಲ್ ಮಿಚೆಲ್ 1 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಡೇವೊನ್ ಕಾನ್ವೆ 7 ರನ್ ಸಿಡಿಸಿ ಔಟಾದರು. ನಾಯಕ ಟಾಮ್ ಲಾಥಮ್ 1 ರನ್‌ಗೆ ಸೀಮಿತರಾದರು. ಇದರಿಂದ ನ್ಯೂಜಿಲೆಂಡ್ 15 ರನ್‌ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಗ್ಲೆನ್ ಪಿಲಿಫ್ಸ್ ಹಾಗೂ ಮಿಚೆಲ್ ಬ್ರೇಸ್‌ವೆಲ್ ಜೊತೆಯಾಟ ತಂಡದ ಮೊತ್ತ ಏರಿಕೆಗೆ ಕಾರಣರಾದರು. ಬ್ರೇಸ್‌ವೆಲ್ 22 ರನ್ ಸಿಡಿಸಿ ಔಟಾದರು.

ಬಳಿಕ ಪಿಲಿಫ್ಸ್ ಹಾಗೂ ಸ್ಯಾಂಟ್ನರ್ ಜೊತೆಯಾಟದಿಂದ ನ್ಯೂಜಿಲೆಂಡ್ 100 ರನ್ ಗಡಿ ದಾಟಿತು. ಆದರೆ ಸ್ಯಾಂಟ್ನರ್ 27 ರನ್ ಸಿಡಿಸಿ ನಿರ್ಗಮಿಸಿದರು. ಇದರೊಂದಿಗೆ ಬ್ರೇಸ್‌ವೆಲ್ ಹಾಗೂ ಸ್ಯಾಂಟ್ನರ್ ಜೊತೆಯಾಟಕ್ಕೂ ಬ್ರೇಕ್ ಬಿದ್ದಿತು. ಗ್ಲೆನ್ ಪಿಲಿಪ್ಸ್ 36 ರನ್ ಕಾಣಿಕೆ ನೀಡಿದರು. ಅಂತಿಮವಾಗಿ ಬ್ಲೈರ್ ಟಿಕ್ನರ್ ವಿಕೆಟ್ ಪತನಗೊಂದಿಗೆ ನ್ಯೂಜಿಲೆಂಡ್ 34.3 ಓವರ್‌ಗಳಲ್ಲಿ 108 ರನ್‌ಗೆ ಆಲೌಟ್ ಆಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!