ಜಮ್ಮುವಿನಲ್ಲಿ ಅವಳಿ ಸ್ಫೋಟ: 6 ಮಂದಿ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮುವಿನ (Jammu) ನರ್ವಾಲ್ ಪ್ರದೇಶದಲ್ಲಿ ಅವಳಿ ಸ್ಫೋಟ ಸಂಭವಿಸಿ, ಕನಿಷ್ಠ 6 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಜಮ್ಮು ಪೊಲೀಸ್ ಎಡಿಜಿ ಮುಖೇಶ್ ಸಿಂಗ್ ಮಾಹಿತಿ ನೀಡಿದ್ದು,ಜಮ್ಮುವಿನ ನರ್ವಾಲ್‍ನ ಟ್ರಾನ್ಸ್‌ಪೋರ್ಟ್ ನಗರದ ಬಸ್ ಯಾರ್ಡ್ ಬಳಿ ಎರಡು ಅವಳಿ ಸ್ಫೋಟಗಳು ಸಂಭವಿಸಿವೆ. ಈ ವೇಳೆ 6 ನಾಗರಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ನಾಗರಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಜಮ್ಮುವಿನ ನರ್ವಾಲ್‌ ಪ್ರದೇಶದಲ್ಲಿ ಐಇಡಿ ಬಾಂಬ್‌ ಬ್ಲಾಸ್ಟ್‌ ಆಗಿರಬಹುದು ಎಂದು ಮೂಲಗಳು ತಿಳಿಸಿವೆ. ಇನ್ನು, ಸ್ಥಳಕ್ಕೆ ಭಾರತೀಯ ಸೇನೆ, ಜಮ್ಮು ವಲಯದ ಎಡಿಜಿಪಿ ಸಹ ಭೇಟಿ ಕೊಟ್ಟಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ .

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಈಗಾಗಲೇ ಜಮ್ಮು ಕಾಶ್ಮೀರವನ್ನು ತಲುಪಿದೆ. ಜೊತೆಗೆ ಗಣರಾಜ್ಯೋತ್ಸವಕ್ಕೆ ಇನ್ನೂ ನಾಲ್ಕು ದಿನಗಳಷ್ಟೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಈ ಯಾತ್ರೆಗೆ ಹೈಅಲರ್ಟ್ ಘೋಷಿಸಲಾಗಿದೆ.

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮಾಜಿ ಶಾಸಕರ ಮನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿತ್ತು. ಸುರನ್‍ಕೋಟೆಯ ಮಾಜಿ ಶಾಸಕ ಚೌಧರಿ ಮೊಹಮ್ಮದ್ ಅಕ್ರಮ್ ಶುಕ್ರವಾರ ಸಂಜೆ ಈ ಘಟನೆ ಸಂಭವಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!