ಕೀವ್’ಗಾಗಿ ಮಹಾಕದನ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾನುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ ಉಕ್ರೇನ್-ರಷ್ಯ ಕದನ. ಶನಿವಾರದ ಬಹುದಿನ ರಷ್ಯ ದಾಳಿಯ ತೀವ್ರತೆ ಕಡಿಮೆ ಇತ್ತು. ಉಕ್ರೇನ್ ಶಸ್ತ್ರತ್ಯಾಗ ಮಾಡಿ ಮಾತುಕತೆಗೆ ಬರಲಿ ಎಂದು ರಷ್ಯ ನಿರೀಕ್ಷಿಸಿತ್ತು. ಆದರೆ ಯಾವಾಗ ಉಕ್ರೇನ್ ಅಧ್ಯಕ್ಷ ವ್ಲೊದಿಮಿರ್ ಜೆಲೆನ್ಸ್ಕಿ ಸೇನೆಯೊಂದಿಗೆ ಬಲವಾಗಿ ನಿಂತು ಸಂಧಾನದ ಸಾಧ್ಯತೆಗಳನ್ನು ತಿರಸ್ಕರಿಸಿದರೋ ಆಗ ರಷ್ಯ ತಾನು “ಎಲ್ಲ ದಿಕ್ಕು”ಗಳಿಂದ ದಾಳಿ ಹೆಚ್ಚಿಸುವುದಾಗಿ ಹೇಳಿತು.

ಇದೀಗ ಭಾನುವಾರ ಉಕ್ರೇನ್ ರಾಜಧಾನಿ ಕೀವ್’ನಲ್ಲಿ ಅದಾಗಲೇ ಎರಡು ಸ್ಫೋಟಗಳಾಗಿರುವ ವರದಿಯಾಗಿದೆ. ರಾಜಧಾನಿಯ ಬೀದಿಗಳಲ್ಲೇ ಈಗ ಕದನಕಣ ತೆರೆದುಕೊಂಡಿದೆ.

ಉಕ್ರೇನ್ ನ ಎರಡನೇ ದೊಡ್ಡ ನಗರ ಖಾರ್ಕಿವ್’ನಲ್ಲಿ ಗ್ಯಾಸ್ ಪೈಪ್ಲೈನ್ ಸ್ಫೋಟಿಸಿರುವುದು ದೊಡ್ಡ ಕೋಲಾಹಲವನ್ನೇ ಉಂಟುಮಾಡಿದೆ.

ಉಕ್ರೇನ್ ಪಡೆಗಳೂ ತಮ್ಮೆಲ್ಲ ಶಕ್ತಿ ವ್ಯಯಿಸಿ ಸೆಣೆಸುತ್ತಿವೆ. ರಷ್ಯ-ಚೆಚನ್ ಯೋಧರ ವಿಶೇಷ ದಳವೊಂದರ ಗುಂಪನ್ನು ಸಂಪೂರ್ಣ ನಾಶಪಡಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!