ಡೆಲ್ಲಿ ಕ್ಯಾಪಿಟಲ್ಸ್​​ ಗೆ ಭರ್ಜರಿ ಟಾರ್ಗೆಟ್​ ಕೊಟ್ಟ KKR: ಡೆಲ್ಲಿಗೆ 273 ರನ್​​ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ವೈ.ಎಸ್​​ ರಾಜಶೇಖರ್​ ರೆಡ್ಡಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ.

ಅಲ್ಲದೆ, ಕೆಕೆಆರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ಪರ ಆರಂಭಿಕರಾಗಿ ಆಡಿದ ಸುನಿಲ್ ನರೈನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸುನಿಲ್ ನರೈನ್ ಕೇವಲ 39 ಎಸೆತಗಳಲ್ಲಿ ನಾಲ್ಕು 6 ಮತ್ತು 7 ರನ್ ಗಳಿಸಿ 85 ರನ್ ಗಳಿಸಿದರು..

ನಂತರ ಬಂದ ರಘುವಂಶಿ ಕೂಡ ಬಿರುಸಿನ ಬ್ಯಾಟಿಂಗ್​ ಮಾಡಿದ್ದಾರೆ. ಕೇವಲ 27 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಐದು ಬೌಂಡರಿ ಸೇರಿದಂತೆ 54 ರನ್ ಗಳಿಸಿದರು. ಆಂಡ್ರೋ ರಸೆಲ್ ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್​​, 4 ಫೋರ್​ ಒಟ್ಟು 41 ರನ್ ಗಳಿಸಿದರು.

ಶ್ರೇಯಸ್​ ಅಯ್ಯರ್​ 2 ಸಿಕ್ಸರ್​ ಸಮೇತ 18 ರನ್​, ರಿಂಕು ಸಿಂಗ್​ 3 ಸಿಕ್ಸರ್​​, 1 ಫೋರ್​ನೊಂದಿಗೆ 26 ರನ್​ ಗಳಿಸಿದ್ರು. ಈ ಮೂಲಕ ಕೆಕೆಆರ್​​ ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 272 ರನ್​ ಗಳಿಸುವ ಮೂಲಕ ಆರ್​​ಸಿಬಿ ದಾಖಲೆ ಮುರಿದಿದೆ. ಡೆಲ್ಲಿಗೆ 273 ರನ್​​ ಟಾರ್ಗೆಟ್​ ಕೊಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!