ಮೈಸೂರಿನಲ್ಲಿ ಅಧಿಕಾರಿಗಳ ಭರ್ಜರಿ‌ ರೇಡ್: 98.56 ಕೋಟಿ ಮೌಲ್ಯದ ಬಿಯರ್, ಕಚ್ಚಾ ವಸ್ತು ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಜಿಲ್ಲೆಯ ಚಾಮರಾಜನಗರ ಲೋಕಸಭಾ ಕ್ಷೇತ್ರದ ನಂಜನಗೂಡಿನ ಯುಬಿ ತಯಾರಿಕಾ ಘಟಕದಲ್ಲಿ 98.56 ಕೋಟಿ ಮೌಲ್ಯದ ಬಿಯರ್ ಹಾಗೂ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಅಧಿಕಾರಿಗಳು ಭಾರೀ ಕಾರ್ಯಾಚರಣೆ ನಡೆಸಿ ಪ್ರಥಮ ಬಾರಿಗೆ ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. 6.03 ಲಕ್ಷ ರೂ. ಬಿಯರ್ ಕೇಸ್, 66.16 ಲಕ್ಷ ಲೀಟರ್ ಬಿಯರ್, 6.5 ಲಕ್ಷ ಕೆ.ಜಿ ಕಚ್ಚಾವಸ್ತು ಸೇರಿದಂತೆ 98.52 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಅಕ್ರಮವಾಗಿ ಸಂಗ್ರಹಿಸಿದ 7,000 ಬಿಯರ್‌ನ ಕೇಸ್‌ಗಳನ್ನು ಉತ್ಪಾದಿಸಿ ಕೇರಳಕ್ಕೆ ಕಳುಹಿಸಿದೆ ಎಂದು ವರದಿಯಾಗಿದೆ. ಸದ್ಯ 17 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಬಕಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!