October 10, 2026
Saturday, October 10, 2026
spot_img

ಕೆಎಲ್ ರಾಹುಲ್ 152 ರನ್ ಸಿಡಿಸಿದರೂ ತಪ್ಪಲಿಲ್ಲ ಸೋಲು: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಣ್ಣುಮುಕ್ಕಿಸಿದ ಪಂಜಾಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 264 ರನ್‌ಗಳ ಬೃಹತ್ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ ಅಬ್ಬರದ ಬ್ಯಾಟಿಂಗ್ ಮೂಲಕ ಕೇವಲ 18.5 ಓವರ್‌ಗಳಲ್ಲಿ ತಲುಪುವ ಮೂಲಕ 6 ವಿಕೆಟ್‌ಗಳ ಅದ್ಭುತ ಜಯ ಸಾಧಿಸಿದೆ. ಶ್ರೇಯಸ್ ಅಯ್ಯರ್ ಮತ್ತು ಪ್ರಭುಸಿಮ್ರಾನ್ ಸಿಂಗ್ ಅವರ ಸ್ಫೋಟಕ ಆಟ ಪಂಜಾಬ್ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಕ್ಷರಶಃ ಪಂಜಾಬ್ ಬೌಲರ್‌ಗಳನ್ನು ದಂಡಿಸಿದರು. ಕೇವಲ 67 ಎಸೆತಗಳಲ್ಲಿ 16 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಅಜೇಯ 152 ರನ್ ಚಚ್ಚಿದರು. ಇವರಿಗೆ ಸಾಥ್ ನೀಡಿದ ನಿತೀಶ್ ರಾಣಾ 44 ಎಸೆತಗಳಲ್ಲಿ 91 ರನ್ ಸಿಡಿಸಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 264ಕ್ಕೆ ತಲುಪಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್‌ಗೆ ಪ್ರಭುಸಿಮ್ರಾನ್ ಸಿಂಗ್ (26 ಎಸೆತಗಳಲ್ಲಿ 76 ರನ್) ಮತ್ತು ಪ್ರಿಯಾಂಶ್ ಆರ್ಯ (17 ಎಸೆತಗಳಲ್ಲಿ 43 ರನ್) ಸ್ಫೋಟಕ ಆರಂಭ ನೀಡಿದರು. ಮೊದಲ 10 ಓವರ್‌ಗಳಲ್ಲಿ ತಂಡ ಭರ್ಜರಿ ವೇಗದಲ್ಲಿ ರನ್ ಕಲೆಹಾಕಿತು. ಮಧ್ಯಮ ಓವರ್‌ಗಳಲ್ಲಿ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಆಟವಾಡಿದರು. ಅಯ್ಯರ್ 36 ಎಸೆತಗಳಲ್ಲಿ 71 ರನ್ ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ:

ಡೆಲ್ಲಿ ಕ್ಯಾಪಿಟಲ್ಸ್: 264/2 (20 ಓವರ್) – ಕೆಎಲ್ ರಾಹುಲ್ 152*, ನಿತೀಶ್ ರಾಣಾ 91.

ಪಂಜಾಬ್ ಕಿಂಗ್ಸ್: 265/4 (18.5 ಓವರ್) – ಪ್ರಭುಸಿಮ್ರಾನ್ 76, ಶ್ರೇಯಸ್ ಅಯ್ಯರ್ 71*.

ಫಲಿತಾಂಶ: ಪಂಜಾಬ್ ಕಿಂಗ್ಸ್‌ಗೆ 6 ವಿಕೆಟ್‌ಗಳ ಜಯ.

Must Read