May 25, 2026
Monday, May 25, 2026
spot_img

ಇನ್ನೊಮ್ಮೆ ಫೋಟೋ ತೆಗೆದ್ರೆ ಹುಷಾರ್…! ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡ ಕ್ಲಾಸೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟಿಗರ ಮೇಲಿನ ಅಭಿಮಾನ ಕೆಲವೊಮ್ಮೆ ಮಿತಿಮೀರಿ ಖಾಸಗಿತನಕ್ಕೂ ಧಕ್ಕೆ ತರುತ್ತದೆ. ಇಂತಹ ಘಟನೆಯೊಂದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಹೆನ್ರಿಕ್ ಕ್ಲಾಸೆನ್, ತಮ್ಮ ಕುಟುಂಬದೊಂದಿಗೆ ಇದ್ದ ವೇಳೆ ಅತಿಯಾಗಿ ವರ್ತಿಸಿದ ಅಭಿಮಾನಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ಮತ್ತು ಮಗಳೊಂದಿಗೆ ತೆರಳುತ್ತಿದ್ದ ಕ್ಲಾಸೆನ್ ಅವರನ್ನು ಅಭಿಮಾನಿಯೊಬ್ಬರು ತುಂಬಾ ಹತ್ತಿರದಿಂದ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದಾರೆ. ಹಲವು ಬಾರಿ ನಿಲ್ಲಿಸುವಂತೆ ಮನವಿ ಮಾಡಿದರೂ ಆತ ಹಿಂದೇಟು ಹಾಕದ ಹಿನ್ನೆಲೆಯಲ್ಲಿ ಕ್ಲಾಸೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕು ಎಂದು ಸ್ಪಷ್ಟವಾಗಿ ಹೇಳಿ, ಮತ್ತೊಮ್ಮೆ ಇದೇ ರೀತಿ ವರ್ತಿಸಿದರೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆಯೂ ಅಭಿಮಾನಿಗಳ ಅತಿಯಾದ ಹತ್ತಿರಿಕೆಗೆ ಕ್ಲಾಸೆನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಘಟನೆ ಮತ್ತೆ ಸೆಲೆಬ್ರಿಟಿಗಳ ಖಾಸಗಿತನದ ಗಡಿ ಎಲ್ಲಿ ಎಂಬ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !