ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಹಿಂದುಗಳನ್ನು ಗುರಿಯಾಗಿಸಿ ಇತ್ತೀಚೆಗೆ ಇಂಕ್ವಿಲಾಬ್ ಖಾನ್ ಚಾಕು ಮೂಲಕ ದಾಳಿ ನಡೆಸಿದ ಘಟನೆ ಸಂಬಂಧ ದೇವಸ್ಥಾನ ಪಕ್ಕದಲ್ಲೇ ಸರ್ಕಾರಿ ಜಾಗ ಅತಿಕ್ರಮಣ ಮಾಡಿ ಇಂಕ್ವಿಲಾಬ್ ಖಾನ್ ಕಟ್ಟಿದ್ದ 5 ಅಂತಸ್ತಿನ ಮನೆಯನ್ನು ಬೃಹತ್ ಮುಂಬೈ ಪಾಲಿಕೆ ಧ್ವಂಸ ಮಾಡಿದೆ.
ಮಹಾರಾಷ್ಟ್ರ ಸಚಿವರ ಆದೇಶದಂತೆ ಅನಧಿಕೃತ ಮನೆಯನ್ನು ಬಿಎಂಸಿ ಧ್ವಂಸ ಮಾಡಿದೆ.
ಸಾಕಿ ನಾಕಿ ವಲಯದಲ್ಲಿ ಇಂಕ್ವಿಲಾಬ್ ಖಾನ್ ಹಿಂದುಗಳನ್ನು ಟಾರ್ಗೆಟ್ ಮಾಡಿದ್ದ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇರುವ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಲಾಗಿತ್ತು. ಈ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟಲಾಗಿತ್ತು.ಕಟ್ಟಡದ ಪಕ್ಕದಲ್ಲೇ ಇದ್ದ ಹಿಂದು ದೇವಸ್ಥಾನಕ್ಕೂ ಇದರಿಂದ ಸಮಸ್ಯೆಯಾಗಿತ್ತು. ಹೀಗಾಗಿ ದೇವಸ್ಥಾನದ ಭಕ್ತರು ಇಂಕ್ವಿಲಾಬ್ ವಿರುದ್ದ ಆಕ್ರೋಶ ಹೊರಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಇಂಕ್ವಿಲಾಬ್ ಖಾನ್ ಮಾರ್ಚ್ 14 ರಂದು 23 ವರ್ಷದ ಸಿದ್ದೇಶ್ ಪ್ರಕಾಶ್ ಘೋರ್ಪಡೆ, 28 ವರ್ಷದ ರಾಜೇಶ್ ತಂಗರಾಜ್ ಚೆಟ್ಟಿಯಾರ್, 52 ವರ್ದ ಲಕ್ಷ್ಮಿ ಚೆಟ್ಟಿಯಾರ್, 20 ವರ್ಷದ ವಿಕ್ಕಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದನು.
ಈ ದಾಳಿ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಕೆಲ ಹಿಂದುಗಳ ಮೇಲೂ ದಾಳಿಗೆ ಮುಂದಾಗಿದ್ದನು. ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಇತ್ತ ಇಂಕ್ವಿಲಾಬ್ ಖಾನ್ ತಲೆಮರೆಸಿಕೊಂಡಿದ್ದನು. ಈ ವೇಳೆ ಸಾಕಿ ನಾಕಿ ವಲಯದಲ್ಲಿ ಈತನ 5 ಅಂತಸ್ತಿನ ಕಟ್ಟಡ ಅನಧಿಕೃತ ಮನೆಯನ್ನು ಮುಂಬೈ ಪಾಲಿಕೆ ಭಾರಿ ಪೊಲೀಸ್ ಬಂದೋಬಸ್ತ್ ಮೂಲಕ ಧ್ವಂಸ ಮಾಡಿದೆ.ಇಂಕ್ವಿಲಾಬ್ ಖಾನ್ ವಿರುದ್ದ ಈಗಾಗಲೇ ಡ್ರಗ್ಸ್ ಸಾಗಾಟ ಪ್ರಕರಣ ಸೇರಿದಂತೆ ಹಲವು ಇತರ ಪ್ರಕರಣಗಳು ದಾಖಲಾಗಿದೆ.