HEALTH| ನೀವು ಫಿಶ್‌ ಪೆಡಿಕ್ಯೂರ್‌ ಮಾಡಿಸಿಕೊಳ್ತೀರಾ? ಈ ಬಗ್ಗೆ ಗಮನವಿರಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇದೀಗ ಎಲ್ಲರೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಮುಖ ಮಾತ್ರವಲ್ಲದೆ ಕಾಲು, ಪಾದಗಳಿಗೂ ಹೆಚ್ಚಿನ ಆದ್ಯತೆ ಇದೆ. ಈ ನಿಟ್ಟಿನಲ್ಲಿ ಬಹುತೇಕ ಎಲ್ಲರೂ ಫಿಶ್‌ ಪೆಡಿಕ್ಯೂರ್‌ ಮೊರೆ ಹೋಗುತ್ತಾರೆ. ಅಂದರೆ ಪಾದದ ಸೌಂದರ್ಯಕ್ಕಾಗಿ ಮೀನಿನ ತೊಟ್ಟಿಯಲ್ಲಿ ಪಾದಗಳನ್ನು ಇಡುವುದು. ಇದು ಚಿಕಿತ್ಸೆಯ ಒಂದು ರೂಪವಾಗಿದೆ. ಈ ಚಿಕಿತ್ಸೆಯ ನಂತರ ಪಾದಗಳ ಚರ್ಮವು ಸುಂದರ ಮತ್ತು ಸ್ವಚ್ಛವಾಗಿರುತ್ತದೆ ಎಂಬುದು ನಂಬಿಕೆ. ವಾಸ್ತವವಾಗಿ, ಈ ಬಗೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆಯೂ ತಿಳಿದಿರಲಿ.

ಫಿಶ್‌ ಪೆಡಿಕ್ಯೂರ್‌ ಟರ್ಕಿಯಲ್ಲಿ ಹುಟ್ಟಿಕೊಂಡ ಒಂದು ಚಿಕಿತ್ಸೆಯಾಗಿದೆ. ಇದರಲ್ಲಿ ಪಾದಗಳನ್ನು ಮೀನು ತುಂಬಿದ ನೀರಿನ ತೊಟ್ಟಿಯಲ್ಲಿ ಇರಿಸಲಾಗುತ್ತದೆ. ಈ ಮೀನುಗಳು ಪಾದದ ಸತ್ತ ಚರ್ಮವನ್ನು ತಿಂದು ಪಾದವನ್ನು ಆರೋಗ್ಯವಾಗಿರಿಸುತ್ತವೆ.

ಗಮನಿಸಬೇಕಾದ ಅಂಶಗಳು

  • ಫಿಶ್‌ ಪೆಡಿಕ್ಯೂರ್‌ ಹೋದಾಗ ನೀರನ ಟಬ್‌ ಸ್ವಚ್ಛಗೊಳಿಸಲಾಗಿದೆಯೇ ಎಂದು ಕಂಡುಕೊಳ್ಳಿ. ಒಂದೇ ಟಬ್‌ನಲ್ಲಿ ಅನೇಕರು ತಮ್ಮ ಪಾದಗಳನ್ನಿರಿಸಿರುತ್ತಾರೆ. ಇದರಿಂದ ನೀರು ಕಲುಷಿತವಾಗಿರುವ ಸಾಧ್ಯತೆ ಹೆಚ್ಚು.
  • ನೈರ್ಮಲ್ಯ ಸಮಸ್ಯೆ ಹೆಚ್ಚಾದಂತೆ ರಕ್ತ ಸಂಬಂಧಿ ಕಾಯಿಲೆಗಳು ಬರುವ ಅಪಾಯವಿದೆ.
  • ಟಬ್‌ಗೆ ಹಾಕುವ ಮೀನಿನಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳೂ ಇರುತ್ತವೆ. ಇದು ಅನೇಕ ಸೋಂಕುಗಳ ಅಪಾಯಕ್ಕೆ ಕಾರಣವಾಗುತ್ತದೆ.
  • ಟಬ್‌ನಲ್ಲಿರುವ ಮೀನುಗಳು ಸತ್ತ ಮೀನುಗಳನ್ನು ತಿನ್ನುತ್ತವೆಯಂತೆ. ಅವುಗಳಿಗೆ ಸಾಕಷ್ಟು ಆಹಾರ ನೀಡದಿದ್ದರೆ, ಹಸಿವಿನಿಂದ ಜನರ ಕಾಲಿನ ಚರ್ಮವನ್ನು ಕಚ್ಚಿ ತಿನ್ನುತ್ತವೆ. ಇದು ಅಪಾಯಕಾರಿ ಸೋಂಕುಗಳಿಗೆ ಕಾರಣವಾಗಬಹುದು.
  • ವಾಸ್ತವವಾಗಿ ಫಿಶ್‌ ಪೆಡಿಕ್ಯೂರ್‌ ವಿಧಾನ ಒಳ್ಳೆಯದೇ ಆದರೂ ಅದರ ಸುತ್ತಲಿನ ಆರೋಗ್ಯ ಸಮಸ್ಯೆಗಳನ್ನು ನೆನಪಿಟ್ಟುಕೊಳ್ಳುವುದು ಸಹ ಅಗತ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!