ಗಾಳಿ, ಬೆಳಕು ಇಲ್ಲ, ಹೊರಗೆ ಬರ‍್ತೀವಿ ಅನ್ನೋ ನಂಬಿಕೆ ಇರಲಿಲ್ಲ: ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ಮಾತುಗಳಿವು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅವಶೇಷಗಳು ಬೀಳುತ್ತಾ ಹೋದಂತೆ ಗೊತ್ತಾಯ್ತು ನಾವು ಸಿಕ್ಕಿಹಾಕಿಕೊಂಡಿದ್ದೀವಿ ಅಂತ, 17  ದಿನ ಗಾಳಿಯಿಲ್ಲ, ಬೆಳಕಿಲ್ಲ ಬದುಕುತ್ತೀವಿ ಅನ್ನೋ ನಂಬಿಕೆಯೂ ಇರಲಿಲ್ಲ..

ಸುರಂಗದಲ್ಲಿ ಸಿಲುಕಿ ಪುನರ್ಜನ್ಮ ಪಡೆದು ಹೊರಬಂದ ಕಾರ್ಮಿಕರ ಮನದಾಳದ ಮಾತುಗಳಿವು..

ಕಾರ್ಮಿಕ ವಿಶ್ವಜಿತ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಮೊದಲ ದಿನ ಸಿಕ್ಕಾಪಟ್ಟೆ ಹೆದರಿದ್ದೆವು, ಕೆಲ ಸಮಯದ ನಂತರ ಪೈಪ್ ಅಳವಡಿಕೆ ಮಾಡಿದರು, ಆಗ ನಮ್ಮನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದೆವು. ಸ್ವಲ್ಪ ಧೈರ್ಯ ಬಂದಿತ್ತು.

ಪೈಪ್‌ನಿಂದ ದಾಲ್, ರೈಸ್, ಡ್ರೈಫ್ರೂಟ್ಸ್ ಕೊಡುತ್ತಿದ್ದರು. ಮೈಕ್ ಅಳವಡಿಕೆ ಮಾಡಿ ನಮ್ಮ ಕುಟುಂಬದವರ ಬಳಿ ಮಾತನಾಡಲು ಅವಕಾಶ ಮಾಡಿಕೊಟ್ಟರು, ಇದರಿಂದ ಬದುಕಬೇಕೆಂಬ ಹಂಬಲ, ಮಾನಸಿಕವಾಗಿ ಧೈರ್ಯ ಹೆಚ್ಚಾಯ್ತು. ಇಂದು ಹೊರಗೆ ಬರುತ್ತೇವೆ, ನಾಳೆ ಹೊರಗೆ ಬರುತ್ತೇವೆ ಎಂದು ಕಾಯುತ್ತಿದ್ದೆವು, ಕುಟುಂಬದವರನ್ನು ಕಾಣುವ ತವಕ ಹೆಚ್ಚಾಗಿತ್ತು. ಕಡೆಗೂ ನಮ್ಮನ್ನು ಉಳಿಸಿಬಿಟ್ಟರು. ನಮ್ಮ ಜೀವ, ಜೀವನ ವಾಪಾಸ್ ಮಾಡಿದ ಎಲ್ಲರಿಗೂ ಧನ್ಯವಾದ. ದೀಪಾವಳಿಯ ಬೆಳಕನ್ನು ಕಂಡಿಲ್ಲ, ಆದರೆ ಈಗ ಕುಟುಂಬದವರ ಜೊತೆಗೂಡಿ ದೀಪಾವಳಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!