ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಅಧಿವೇಶನಕ್ಕೆ ತೆರಳುವ ಮುನ್ನ ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ಬಗ್ಗೆ ಮಾತನಾಡಿದ್ದಿಷ್ಟು..
ಅವರು ಉಲ್ಟಾ ಮಾತಾಡ್ತಾರೆ, ಅದು ಗೊತ್ತಿರೋದೇ ಆದರೆ ನಾವು ಎಲ್ಲಾದ್ಕೂ ರೆಡಿ. ಗ್ಯಾರೆಂಟಿಯಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೌದು, ಆದರೆ ಗೆಲ್ಲೋದಕ್ಕೆ ನಾವು ಮಾಡಿದ ಸ್ಟಾಟರ್ಜಿ ಇದಲ್ಲ. ಜನರಿಗೆ ಸಹಾಯ ಮಾಡಲು ಹುಡುಕಿದ ಮಾರ್ಗ ಅಷ್ಟೆ. ನಾವು ಬಡವರಿಗೆ ಸಹಾಯ ಮಾಡಿದ್ದೇವೆ ಅನ್ನೋ ಖುಷಿ ನಮಗಿದೆ.
ನಮ್ಮ ಗ್ಯಾರೆಂಟಿಯಿಂದಲೇ ತೆಲಂಗಾಣದಲ್ಲಿಯೂ ಗೆಲುವು ಸಾಧಿಸಿದ್ದೇವೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡೋದಕ್ಕೆ ಆರು ತಿಂಗಳು ತೆಗೆದುಕೊಳ್ಳೋ ಪಕ್ಷ ನಮಗೇನು ಸಲಹೆ ನೀಡುತ್ತದೆ ಎಂದು ಪ್ರಶ್ನಿಸಿದ್ದಾರೆ.