ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ: ನ್ಯಾಯಾಲಯದ ತೀರ್ಪು ಪ್ರಕಾರ ಸಮೀಕ್ಷೆ ಎಂದ ನಳಿನ್ ಕುಮಾರ್ ಕಟಿಲ್

ಹೊಸದಿಗಂತ ವರದಿ, ಕಲಬುರಗಿ:

ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದ ತೀಪಿ೯ನ ಪ್ರಕಾರ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಅವರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎನೆಲ್ಲಾ ಕುರುಹು ಸಿಗುತ್ತೆ ? ನ್ಯಾಯಾಲಯ ಎನನ್ನು ತೀಮಾ೯ನ ತೆಗೆದುಕೊಳ್ಳತ್ತದೆಯೋ, ಅದರ ಮೇಲೆ ಮುಂದಿನ ನಿದಾ೯ರ ಆಗಲಿದೆ ಎಂದರು.

ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಬಗ್ಗೆ ಮಾತನಾಡಿದ ಅವರು, ದತ್ತ ಪೀಠದಲ್ಲಿ ಮಾಂಸಾಹಾರ ಸೇವನೆ ವಿಚಾರವನ್ನು ಸರಕಾರ ಸೂಕ್ಷ್ಮ ವಾಗಿ ಗಮನಿಸುತ್ತದೆ. ಆ ರೀತಿ ಆದರೆ ಎನೂ ಕ್ರಮ ತೆಗೆದುಕೊಳ್ಳಬೇಕೋ,ಆ ಕ್ರಮವನ್ನು ಸರಕಾರ ತೆಗೆದು ಕೊಳ್ಳುತ್ತದೆ ಎಂದರು.

ಮದರಸಾ ಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ ವಿಚಾರವಾಗಿ ಮಾತನಾಡಿದ ಕಟಿಲ್, ಎಲ್ಲ ಜಾಗಗಳಲ್ಲಿ ರಾಷ್ಟ್ರಗೀತೆ ಹಾಡಬೇಕು.ಆ ಜಾಗ,ಈ ಜಾಗ ಬೇಡ ಎಂದ ಅವರು,ಮದರಾಸಾಗಳಲ್ಲಿ ಹಾಡಬೇಕೆ ಅಥವಾ ಬೇಡ ಎನ್ನುವುದು ಮುಂದಿನ ತೀಮಾ೯ನವಾಗಿರಲಿದೆ ಎಂದರು.

ಹಿಜಾಬ್ ಬಂತು, ಹಲಾಲ್ ಆಯಿತು, ಎಲ್ಲಾ ವಿಚಾರದಲ್ಲೂ ಸಕಾ೯ರ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಕ್ರಮಗಳ ಮೂಲಕ ನಿಯಂತ್ರಣ ಮಾಡುತ್ತಿದೆ.ಕಾನೂನು ಮತ್ತು ಸಂವಿಧಾನಾತ್ಮಕವಾಗಿ ನಮ್ಮ ಸಕಾ೯ರ ಯಾವುದನ್ನೂ ಹೇಗೆ ತೆಗೆದುಕೊಳ್ಳಬೇಕು ಹಾಗೇ ತೆಗೆದುಕೊಳ್ಳುತ್ತದೆ ಎಂದರು.

ಇನ್ನೂ ಯಾವ ಪಕ್ಷದಲ್ಲೂ ದಲಿತರನ್ನು ಸಿಎಂ ಮಾಡುವುದಿಲ್ಲ ಎಂಬ ಸಂಸದ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ಯಾವ ವಿಚಾರದಲ್ಲಿ ಈ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಅವರನ್ನು ವಿಚಾರಿಸಿ ಈ ಬಗ್ಗೆ ಮಾತನಾಡುವೆ ಎಂದರು.

ಭಜರಂಗದಳದ ಕಾಯ೯ಕತ೯ರಿಗೆ ಶಸ್ತ್ರಾಸ್ತ್ರ ತರಬೇತಿ ವಿಚಾರ ಬಗ್ಗೆ ಮಾತನಾಡಿ, ಭಜರಂಗದಳದ ಕಾಯ೯ಕತ೯ರಿಗೆ ಫೈರಿಂಗ್ ಟ್ರೈನಿಂಗ್ ಕೊಟ್ಟಿಲ್ಲ.ಅತೀ ಸಣ್ಣದಾದ ತ್ರಿಷೂಲ ಕೊಡುತ್ತಿದ್ದಾರೆ. ಅದು ಸಹ ಕಾನೂನು ಮೀರಿದ ರೀತಿಯಲ್ಲಿ ಇಲ್ಲ ಎಂದರು. ಅಲ್ಲಿ ಭಜರಂಗದಳದ ಕಾಯ೯ಕತ೯ರಿಗೆ ಕರಾಟೆ,ಯೋಗ,ದೇಶಭಕ್ತಿ ಪ್ರೇರಣೆ ನೀಡುವ ತರಬೇತಿ ನೀಡಲಾಗುತ್ತದೆ ಎಂದರು.

ಶಾಲಾ ಆವರಣ ಕ್ಯಾಂಪ್,ಗೆ ತೆಗೆದುಕೊಂಡಿದ್ದು, ರಜೆ ಇರುವ ಕಾರಣಕ್ಕೆ ಬಳಕೆ ಮಾಡಿಕೊಂಡಿರಬಹುದು.ಆದರೆ, ಅಲ್ಲಿನ ವಿದ್ಯಾರ್ಥಿ ಗಳಿಗೆ ತರಬೇತಿ ಕೊಟ್ಟಿಲ್ಲ ಎಂದರು.

ಪಠ್ಯ ಪುಸ್ತಕಗಳಲ್ಲಿ ಡಾ.ಹೆಡಗೆವಾರ ಪಾಠ ಸೇಪ೯ಡೆ ವಿಚಾರವಾಗಿ ಮಾತನಾಡಿದ ಅವರು,ರಾಷ್ಟ್ರದ ಚಿಂತನೆ, ರಾಷ್ಟ್ರೀಯ ಭಕ್ತಿ ಕಲಿಸುವ ಸಂಸ್ಕಾರ ಕಲಿಸುವ ಎಲ್ಲಾ ಪಾಠಗಳು ಅಗತ್ಯ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!