ಕಾಫಿ ಬೆಳೆಗಾರರಿಗೆ ತೂಕದಲ್ಲಿ ವಂಚನೆ: ತಪ್ಪಿತಸ್ಥರ ವಿರುದ್ಧ 9 ಪ್ರಕರಣ ದಾಖಲು

ಹೊಸದಿಗಂತ ವರದಿ, ಕೊಡಗು:
ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಕಾಫಿ ಮಾರಾಟ ಮಾಡುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ಹೋಗುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿವೆ.
ಈ ಕುರಿತು ಜಿಲ್ಲೆಯಲ್ಲಿ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಕಾಫಿ ಮಾರಾಟ ಮಳಿಗೆಗಳಲ್ಲಿ ವಿಶೇಷ ತಪಾಸಣಾ ಕಾರ್ಯ ನಡೆಸಿದ್ದು, ಈ ವೇಳೆ ಅನೇಕ ಅಕ್ರಮಗಳು ಪತ್ತೆಯಾಗಿವೆ. ತೂಕ ವಂಚನೆಯಲ್ಲಿ ತೊಡಗಿದ್ದ ಮಾರಾಟಗಾರರ ವಿರುದ್ಧ ಅಧಿಕಾರಿಗಳು ಒಟ್ಟು 9 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕಾಫಿ ತೂಕ, ಅಳತೆಗೆ ಸಂಬಂಧಿಸಿದಂತೆ ಬೆಳೆಗಾರರು ಹಾಗೂ ಇತರ ಗ್ರಾಹಕರ ದೂರುಗಳೇನಾದರೂ ಇದ್ದಲ್ಲಿ, ಕಾನೂನು ಮಾಪನಶಾಸ್ತ್ರ ನಿರೀಕ್ಷಕ (ಮೊ. ಸಂ.9164535342)ಸಂರ್ಕಿಸಿ ಎಂದು ಜಿಲ್ಲಾ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಡಿ.ಲಿಂಗರಾಜು ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಕಾಫಿ ಬೆಳೆಗಾರರು ತಮ್ಮಲ್ಲಿರುವ ತೂಕದ ಯಂತ್ರಗಳನ್ನು ಇಲಾಖೆಯಿಂದ ತಪಾಸಣೆಗೊಳಪಡಿಸಿಕೊಂಡು ಇಲಾಖಾ ಪ್ರಮಾಣ ಪತ್ರವನ್ನು ಪಡೆದು ನಿಖರತೆಯನ್ನು ಖಚಿತಪಡಿಸಿಕೊಳ್ಳಬೇಕು. ಕಾಫಿ ಖರೀದಿದಾರರು ಮತ್ತು ವರ್ತಕರು ಉಪಯೋಗಿಸುವ ತೂಕದ ಸಾಧನಗಳಿಗೆ ಇಲಾಖೆಯಿಂದ ಮುದ್ರೆ ಸಿಕ್ಕಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡು ವ್ಯವಹಾರ ನಡೆಸುವಂತೆ ಅವರು ಕಾಫಿ ಬೆಳೆಗಾರರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!