ಅತ್ಯಧಿಕ ಮಾದಕ ವಸ್ತುಗಳ ಬಳಕೆ ಪಟ್ಟಿಯಲ್ಲಿ ಕೊಡಗು-ಉಡುಪಿ!

ಹೊಸದಿಗಂತ ವರದಿ,ಮಡಿಕೇರಿ:

ಮಾದಕ ವಸ್ತುಗಳನ್ನು ಅತ್ಯಧಿಕವಾಗಿ ಬಳಕೆ ಮಾಡುತ್ತಿರುವ 272 ಜಿಲ್ಲೆಗಳನ್ನು ಕೇಂದ್ರ ಸರಕಾರ ಪಟ್ಟಿ ಮಾಡಿದ್ದು, ಇದರಲ್ಲಿ ಕೊಡಗು, ಉಡುಪಿ ಸೇರಿದಂತೆ ಕರ್ನಾಟಕದ ಆರು ಜಿಲ್ಲೆಗಳು ಸೇರಿವೆ.
ಬಿಜೆಪಿಯ ಕೆ.ಸಿ.ರಾಮಮೂರ್ತಿ ಅವರು ಕೇಳಿದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರಿಸಿರುವ ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಈ ವಿಷಯ ತಿಳಿಸಿದ್ದಾರೆ.
ದೇಶದ 272 ಜಿಲ್ಲೆಗಳನ್ನು ಅತ್ಯಧಿಕ ಮಾದಕವಸ್ತು ಬಳಸುವ ಜಿಲ್ಲೆಗಳೆಂದು ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಕರ್ನಾಕರದ ಬೆಂಗಳೂರು, ಕೋಲಾರ, ಮೈಸೂರು, ಕೊಡಗು, ಉಡುಪಿ ಮತ್ತು ರಾಮನಗರ ಜಿಲ್ಲೆಗಳೂ ಸೇರಿವೆ. ಈ ಜಿಲ್ಲೆಗಳಲ್ಲಿ ‘ನಶೆ ಮುಕ್ತ ಭಾರತ ಅಭಿಯಾನ’ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ನಶೆ ಮುಕ್ತ ಭಾರತ ಅಭಿಯಾನದಡಿ ಮಾದಕವಸ್ತು ವ್ಯಸನಿಗಳನ್ನು ಗುರುತಿಸಿ ಸ್ವಯಂಸೇವಕರು ಸಮಾಲೋಚನೆ ನಡೆಸಲಿದ್ದು, ಅವರನ್ನು ವ್ಯಸನ ಮುಕ್ತರನ್ನಾಗಿಸಲು ಒತ್ತು ನೀಡುವರು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆಗಳೂ ಈ ಕಾರ್ಯಕ್ಕೆ ನೆರವಾಗಲಿದ್ದು, ಸಹಜ ಜೀವನಕ್ಕೆ ಮರಳುವಂತೆ ವ್ಯಸನಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ಅವರನ್ನು ಸಮಾಜದ‌ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!