ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಐಸಿಸಿ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಎಲ್ಲ ಪಂದ್ಯಗಳನ್ನು ಗೆದ್ದು ಬೀಗ್ತಿದೆ.
ಈ ಮಧ್ಯೆ ವಿರಾಟ್ ಕೊಹ್ಲಿ ನಿನ್ನೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಪೂರೈಸಿದ್ದರು.
ನಿನ್ನೆ ಕೊಹ್ಲಿ ಜನ್ಮದಿನವೂ ಆಗಿದ್ದು, ಫ್ಯಾನ್ಸ್ ಹೆಚ್ಚೇ ಎಕ್ಸೈಟ್ ಆಗಿದ್ದರು.
ಇದೀಗಷ್ಟೇ ಕೊಹ್ಲಿ ಬೆಂಗಳೂರಿಗೆ ಬಂದಿಳಿದಿದ್ದು, ಏರ್ಪೋರ್ಟ್ನಲ್ಲಿ ವಿರಾಟ್ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನ.12ರಂದು ನೆದರ್ಲೆಂಡ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗದಲ್ಲಿ ಪಂದ್ಯ ನಡೆಯಲಿದ್ದು, ಪಂದ್ಯಕ್ಕಾಗಿ ವಿರಾಟ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಏರ್ಪೋರ್ಟ್ನಲ್ಲಿ ಕೊಹ್ಲಿ ಒಬ್ಬರೇ ಕಾಣಿಸಿದ್ದು, ಉಳಿದ ಟೀಂ ಮೆಂಬರ್ಸ್ ಇಂದು ಸಂಜೆಯೊಳಗೆ ಬೆಂಗಳೂರು ತಲುಪಲಿದ್ದಾರೆ.